ಅಜ್ಜಬಿರು: ಆವೃತ್ತಿಲೆನ ನಡುತ ವ್ಯತ್ಯಾಸೊ

ಒಂತೆ ವಿಸಯೊ ಸೇರಾಯಿನೆ
೧೮ನೇ ಸಾಲ್:
ಅಲೆಕುಲೆಡ್ ಸೃಷ್ಟಿಯಾಯಿನ ಎಲ್ಯ ಎಲ್ಯ ಪನಿಕುಲೆಡ್ ಅಜ್ಜಬಿರು ತೋಜುಂಡು (ತುಂತುರು ಹನಿ ಬಿಲ್ಲುಗಳು ಎಂದು ಇವನ್ನು ಕರೆಯಲಾಗುತ್ತದೆ)
 
ನ್ಯೂಜಿಲೆಂಡ್‌ನನ್ಯೂಜಿಲೆಂಡ್‌‍ದ ಮರೇಟಾಯ್‌ನಲ್ಲಿಮರೇಟಾಯ್‌‍ಡ್ ಒಂದುಒಂಜಿ ತೀವ್ರತೀವ್ರವಾಯಿನ ಬರ್ಸ(ವರ್ಷಧಾರೆಯ) ನಂತರವತ್ತಿ ಬೊಕ್ಕ ಸೂರ್ಯನ ಬೆಳಕುಬೊಲ್ಪು ನೂರೊಂದು ತೂರಿಕೊಂಡುಬತ್ತ್ ಬಂದಾಗನಪಗ ಕಂಡತೂಜುನ ಅಜ್ಜಬಿರು(ಮಳೆಬಿಲ್ಲು.)
ಗಾಳಿಯಲ್ಲಿಗಾಳಿಡ್ ನೀರಿನನೀರ್ ಹನಿಗಳು ಇದ್ದುಪನಿಕುಲು ಇತ್ತ್ ದ್, ಒಂದು ಕೆಳಮಟ್ಟದ ಉನ್ನತಿಯ ಕೋನದಲ್ಲಿ ಅವುಗಳ ಹಿಂಭಾಗದಿಂದ ಸೂರ್ಯನ ಬೆಳಕು ಹೊಳೆಯುತ್ತಿರುವ ಸಂದರ್ಭದಲ್ಲೆಲ್ಲಾ ಮಳೆಬಿಲ್ಲುಗಳನ್ನು ವೀಕ್ಷಿಸಲು ಸಾಧ್ಯವಿದೆ. ಮಳೆಯನ್ನು ಸುರಿಸುತ್ತಿರುವ ಮೋಡಗಳಿಂದಾಗಿ ಅರ್ಧದಷ್ಟು ಆಕಾಶವು ಇನ್ನೂ ಗಾಢತೆಯಿಂದ ಅಥವಾ ಮಸುಕಿನಿಂದ ಕೂಡಿದ್ದಾಗ ಮತ್ತು ಸೂರ್ಯನ ದಿಕ್ಕಿನಲ್ಲಿ ಆಕಾಶವು ನಿಚ್ಚಳವಾಗಿರುವ ತಾಣವೊಂದರಲ್ಲಿ ವೀಕ್ಷಕನಿದ್ದಾಗ, ಅತ್ಯಂತ ನಯನ ಮನೋಹರವಾದ ಮಳೆಬಿಲ್ಲಿನ ಪ್ರದರ್ಶನಗಳು ಸಂಭವಿಸುತ್ತವೆ. ಇದರ ಪರಿಣಾಮವಾಗಿ ಒಂದು ಪ್ರಕಾಶಿಸುವ ಮಳೆಬಿಲ್ಲು ಹೊರಹೊಮ್ಮುತ್ತದೆ ಮತ್ತು ಅದು ಕತ್ತಲಾಗಿರುವ ಹಿನ್ನೆಲೆಯೊಂದಿಗೆ ಒಂದು ವೈದೃಶ್ಯವನ್ನು ತೋರಿಸುತ್ತದೆ.
 
ಜಲಪಾತಗಳು ಅಥವಾ ಕಾರಂಜಿಗಳ ಸಮೀಪದಲ್ಲಿಯೂ ಮಳೆಬಿಲ್ಲಿನ ಪರಿಣಾಮವನ್ನು ಸಾಮಾನ್ಯವಾಗಿ ಕಾಣಬಹುದು. ಇದರ ಜೊತೆಗೆ, ಸೂರ್ಯಪ್ರಕಾಶದಿಂದ ಬೆಳಗುತ್ತಿರುವ ದಿನವೂಂದರ ಅವಧಿಯಲ್ಲಿ ಗಾಳಿಯೊಳಗೆ ನೀರಿನ ಸಣ್ಣಹನಿಗಳನ್ನು ಚೆದುರಿಸುವ ಮೂಲಕವೂ ಈ ಪರಿಣಾಮವನ್ನು ಕೃತಕವಾಗಿ ಸೃಷ್ಟಿಸಬಹುದು. ಅಪರೂಪಕ್ಕೆಂಬಂತೆ, ಒಂದು ಚಂದ್ರನ ಬಿಲ್ಲು ಎಂದು ಕರೆಯಲ್ಪಡುವ ಚಾಂದ್ರ /ಇಂದ್ರಚಾಪ ಅಥವಾ ರಾತ್ರಿವೇಳೆಯ ಮಳೆಬಿಲ್ಲನ್ನು ಗಾಢವಾಗಿ ಬೆಳದಿಂಗಳು ಬೆಳಗುವ ರಾತ್ರಿಗಳಂದು ಕಾಣ ಬಹುದು. ಕಡಿಮೆ ಮಟ್ಟದ ಬೆಳಕಿನಲ್ಲಿ ಬಣ್ಣಕ್ಕೆ ಸಂಬಂಧಿಸಿದ ಮಾನವನ ದೃಷ್ಟಿಯ ಗ್ರಹಿಕೆಯು ಕಳಪೆಯಾಗಿರುವುದರಿಂದ ಚಂದ್ರನ ಬಿಲ್ಲುಗಳು ಬಿಳಿ ಬಣ್ಣದಲ್ಲಿರುವಂತೆ ಅನೇಕ ವೇಳೆ ಗ್ರಹಿಸಲ್ಪಡುತ್ತವೆ.[೧] ಒಂದು ಚೌಕಟ್ಟಿನಲ್ಲಿ ಮಳೆಬಿಲ್ಲೊಂದರ ಸಂಪೂರ್ಣ ಅರ್ಧವೃತ್ತವನ್ನು ಛಾಯಾಚಿತ್ರದಲ್ಲಿ ಸೆರೆಹಿಡಿಯುವುದು ಕಷ್ಟಕರ; ಏಕೆಂದರೆ ಇದಕ್ಕಾಗಿ 84°ಯಷ್ಟಿರುವ ಒಂದು ನೋಟದ ಕೋನವು ಅಗತ್ಯವಾಗಿರುತ್ತದೆ. ಒಂದು 35 ಮಿ.ಮೀ. ಬಿಂಬಗ್ರಾಹಿ (ಕ್ಯಾಮರಾ) ಆದಲ್ಲಿ, 19 ಮಿ.ಮೀ.ನಷ್ಟು ನಾಭಿ ದೂರವನ್ನು (ಫೋಕಲ್‌ ಲೆಂತ್‌) ಹೊಂದಿರುವ ಒಂದು ಮಸೂರ ಅಥವಾ ಕಡಿಮೆ ವಿಶಾಲ-ಕೋನದ ಮಸೂರವು ಇದಕ್ಕೆ ಬೇಕಾಗಬಹುದು. ಒಂದು ಸಮಗ್ರ ನೋಟಕ್ಕೆ ಹಲವಾರು ಬಿಂಬಗಳನ್ನು ಲಗತ್ತಿಸಿ ಹೊಲಿಗೆ ಹಾಕುವುದಕ್ಕೆ ಸಂಬಂಧಿಸಿದ ಶಕ್ತಿಯುತವಾದ ತಂತ್ರಾಂಶವು ಈಗ ಲಭ್ಯವಿರುವುದರಿಂದ, ಅತಿಕ್ರಮಿಸುವ ಚೌಕಟ್ಟುಗಳ ಸರಣಿಯೊಂದರಿಂದ ಸಮಗ್ರ ಚಾಪದ, ಅಷ್ಟೇ ಏಕೆ, ದ್ವಿತೀಯಕ ಬಿಲ್ಲುಗಳ ಬಿಂಬಗಳನ್ನು ಯುಕ್ತವಾದ ರೀತಿಯಲ್ಲಿ ಸುಲಭವಾಗಿ ಸೃಷ್ಟಿಸಬಹುದು. ವಿಮಾನವೊಂದರಿಂದ ಓರ್ವರು ಮಳೆಬಿಲ್ಲಿನ ಸಮಗ್ರ ವೃತ್ತವನ್ನು ನೋಡುವ ಸದವಕಾಶವನ್ನು ಹೊಂದಬಹುದಾಗಿದ್ದು, ಇಲ್ಲಿ ವಿಮಾನದ ನೆರಳು ಕೇಂದ್ರಭಾಗದಲ್ಲಿರುತ್ತದೆ. ಈ ವಿದ್ಯಮಾನ ಮತ್ತು ಪ್ರಭಾಮಂಡಲದ ನಡುವೆ ಗೊಂದಲ ಹುಟ್ಟಿಕೊಳ್ಳುವ ಸಾಧ್ಯತೆಯಿರುತ್ತದೆಯಾದರೂ, ಒಂದು ಪ್ರಭಾಮಂಡಲವು ಸಾಮಾನ್ಯವಾಗಿ ಸಾಕಷ್ಟು ಸಣ್ಣದಾಗಿದ್ದು, ಕೇವಲ 5–20°ಯಷ್ಟು ಪ್ರಮಾಣಕ್ಕೆ ವ್ಯಾಪಿಸುತ್ತದೆ. ಉತ್ತಮವಾಗಿರುವ ಗೋಚರತ್ವದ ಸ್ಥಿತಿಗತಿಗಳಲ್ಲಿ (ಉದಾಹರಣೆಗೆ, ಮಳೆಬಿಲ್ಲಿನ ಹಿಂಭಾಗದಲ್ಲಿ ಒಂದು ಗಾಢವಾದ ಮೋಡವಿರುವುದು), ಎರಡನೇ ಚಾಪವನ್ನು ನೋಡಲು ಸಾಧ್ಯವಿದ್ದು, ಇದರಲ್ಲಿನ ಬಣ್ಣಗಳ ಜೋಡಣಾಕ್ರಮವು ತಿರುಗು-ಮುರುಗಾಗಿರುತ್ತದೆ. ನೀಲಿ ಆಕಾಶದ ಹಿನ್ನೆಲೆಯಲ್ಲಾದರೆ, ಎರಡನೇ ಚಾಪವು ಎಷ್ಟುಬೇಕೋ ಅಷ್ಟು ಗೋಚರವಾಗುತ್ತದೆ.
"https://tcy.wikipedia.org/wiki/ಅಜ್ಜಬಿರು"ಡ್ದ್ ದೆತ್ತೊಂದುಂಡು