ಬಳಕೆದಾರೆ:Vishwanatha Badikana/ಎನ್ನ ಕಲ್ಪುನ ಕಳ5

ವಿಕಿಪೀಡಿಯ:ಚಿತ್ರೊ ಬಳಕೆದ ಕಾರ್ಯನೀತಿ

ಟೆಂಪ್ಲೇಟ್:ನೀತಿಗಳ ಪಟ್ಟಿ

ಚಿತ್ರ ಬಳಕೆಯ ಕಾರ್ಯನೀತಿ ಅನ್ನುವುದು ಕನ್ನಡ ವಿಕಿಪೀಡಿಯಕ್ಕೆ ನೇರವಾಗಿ (ಸ್ಥಳೀಯವಾಗಿ) ಚಿತ್ರಗಳನ್ನು ಅಪ್ಲೋಡ್ ಮಾಡುವ ವಿಷಯಕ್ಕೆ ಸಂಬಂಧಪಟ್ಟ ನಿಯಮಗಳ ಕುರಿತು ಚರ್ಚಿಸುತ್ತದೆ. ಕನ್ನಡ ವಿಕಿಪೀಡಿಯಕ್ಕೆ ಯಾವ ತರದ ಚಿತ್ರಗಳನ್ನು, ಹೇಗೆ, ಯಾವ ನಿಯಮಗಳನ್ನು ಪಾಲಿಸುವ ಮೂಲಕ ಅಪ್ಲೋಡ್ ಮಾಡಬಹುದು ಮತ್ತು ಯಾವ ತರದ ಚಿತ್ರಗಳು ಇದಕ್ಕೆ ಅನರ್ಹ ಎಂಬುದನ್ನು ಈ ಕಾರ್ಯನೀತಿ ನಿರ್ಧರಿಸುತ್ತದೆ.

ಚಿತ್ರಗಳ ಅಪ್ಲೋಡಿಗೆ ಮುನ್ನ ಗಮನಿಸಬೇಕಾದ ಪ್ರಮುಖ ನಿಯಮಗಳು

ಸಂಪೊಲಿಪುಲೆ
  1. ನೀವು ಅಪ್ಲೋಡ್ ಮಾಡುವಾಗ ಹಕ್ಕುಸ್ವಾಮ್ಯದ ಬಗ್ಗೆ ಗಮನವಿರಲಿ.
  2. ಚಿತ್ರದ ಮೂಲವನ್ನು ಅಂದರೆ ಅದನ್ನು ತೆಗೆದುಕೊಂಡ ವೆಬ್, URL, ಅಥವಾ ಛಾಯಾಗ್ರಾಹಕನ ವಿಳಾಸ ಮತ್ತು ಸಂಪರ್ಕವನ್ನು ಸ್ಪಷ್ಟವಾಗಿ ನೀಡಿ.
  3. ಚಿತ್ರದ ವಿವರಣೆ ಮತ್ತು ಪ್ರಸ್ತುತ ಹಕ್ಕುಸ್ವಾಮ್ಯದ ಪರಿಸ್ಥಿತಿಯನ್ನು ವಿವರಣೆಯಲ್ಲಿ ನೀಡಿ.
  4. ಹಕ್ಕುಸ್ವಾಮ್ಯಕ್ಕೆ ಸಂಬಂಧಿತ ಸರಿಯಾದ ಟ್ಯಾಗ್ ಸೇರಿಸಿ.
  5. ಸ್ಪಷ್ಟ ವಿವರಣೆಯೊಂದಿಗೆ ಚಿತ್ರದ ಹೆಸರನ್ನು ನಮೂದಿಸಿ. ಒಂದುವೇಳೆ ಅದೇ ಹೆಸರಿನ ಪ್ರಸ್ತುತ ಚಿತ್ರ ಇದ್ದರೆ, ನಿಮ್ಮ ಹೊಸ ಚಿತ್ರ ಪ್ರಸ್ತುತ ಚಿತ್ರವನ್ನು ಬದಲಿಸುತ್ತದೆ.
  6. ವಿಕಿಪೀಡಿಯ ಪುಟಗಳಲ್ಲಿ ಹೆಚ್ಚು ರೆಸಲ್ಯೂಶನ್ ಚಿತ್ರಗಳನ್ನು ಬಳಸುವ ಬದಲು ನೀವು "ಮಾರ್ಕ್ಅಪ್ ಕೋಡ್" ಬಳಸಿ ಚಿತ್ರದ ಗಾತ್ರ ಕಡಿಮೆ ಮಾಡಬಹುದು. ಚಿತ್ರಗಳನ್ನು ಅಪ್ಲೋಡ್ ಮಾಡುವಾಗ ಫೈಲ್ ಗಾತ್ರವನ್ನು ಕಡಿಮೆಮಾಡಬೇಡಿ ಏಕೆಂದರೆ ಅದೇ ಕಾರಣಕ್ಕಾಗಿ ಚಿತ್ರಗಳನ್ನು ಅನುಪಯುಕ್ತವೆಂದು ಪರಿಣಮಿಸಬಹುದು.
  7. ವಿಕಿಪೀಡಿಯ ಲೇಖನಗಳಲ್ಲಿ, ವಿಷಯಕ್ಕೆ ಸಂಬಂಧವಿರುವ ಚಿತ್ರಗಳನ್ನು ಮಾತ್ರ ಬಳಸಿ.
  8. ಒಂದುವೇಳೆ ನೀವು ಸ್ಥಳೀಯ ಪಠ್ಯದೊಂದಿಗೆ ಚಿತ್ರವನ್ನು ಅಪ್ಲೋಡ್ ಮಾಡುತ್ತಿದ್ದರೆ, ಅದನ್ನು ಉಳಿದ ವಿಕಿಪೀಡಿಯದವರು ಬಳಸಲು ಅನುಕೂಲವಾಗುವಂತೆ ಸ್ಥಳೀಯ ಪಠ್ಯ ಇಲ್ಲದಿರುವ ಮತ್ತೊಂದು ಚಿತ್ರವನ್ನು ಅಪ್ಲೋಡ್ ಮಾಡಿ.
  9. ಚಿತ್ರವನ್ನು JPEG, JPG ಮತ್ತು ಲಾಂಛನಗಳು, ವರ್ಣಚಿತ್ರಗಳು, ಚಿತ್ರಗಳು, ನಕ್ಷೆಗಳು, ಧ್ವಜಗಳನ್ನು PNG ಯಲ್ಲಿ ಅಪ್ಲೋಡ್ ಮಾಡಿ. BMP ಚಿತ್ರಗಳು ಹೆಚ್ಛಿನ ಸ್ಥಳವನ್ನು ಆಕ್ರಮಿಸುವುದರಿಂದ ಅಂತಹ ಚಿತ್ರಗಳನ್ನು ಅಪ್ಲೋಡ್ ಮಾಡಲು ಪರಿಗಣಿಸಬಾರದು.
  10. ಪ್ರತಿಯೊಂದು ಚಿತ್ರಗಳಿಗೆ ಉತ್ತಮ ಪರ್ಯಾಯ ಪಠ್ಯವನ್ನು ಸೇರಿಸಿ.
  11. ನಿಮಗೆ ಯಾವುದೇ ಚಿತ್ರಗಳ ವಿರುದ್ದ ಮೇಲಿನಂತಹ ಗೊಂದಲಗಳಿದ್ದರೆ, ದೂರುಗಳಿದ್ದರೆ ಆ ಚಿತ್ರಕ್ಕೆ ಸಂಬಂಧಿತ ಚರ್ಚೆ ಪುಟದಲ್ಲಿ ಚರ್ಚಿಸಿ.
  12. ವಿಕಿಗೆ ಅಪ್ಲೋಡ್ ಮಾಡಬೇಕಾದ ಚಿತ್ರಗಳು ವಾಟರ್ ಮಾರ್ಕನ್ನು ಹೊಂದಿರಬಾರದು.
  13. ಚಿತ್ರದಲ್ಲಿ ತೆಗೆದವರ ಹೆಸರು ಅಥವಾ ಯಾವುದೇ ಶ್ರೇಯಸ್ಸು, ತಲೆಬರಹ, ಅಸ್ಪಷ್ಟತೆಗಳಿದ್ದಲ್ಲಿ ಅದು ವಿಕಿ ಅಪ್ಲೋಡಿಗೆ ಅನರ್ಹ. ಚಿತ್ರ ತಲೆಬರಹದ ಬಗ್ಗೆಯೋ, ಅಸ್ಪಷ್ಟತೆಯ ಬಗ್ಗೆಯೋ ಇದ್ದು ಅದು ಸಂಬಂಧಿತ ಲೇಖನದಲ್ಲಿದ್ದರೆ ಮಾತ್ರ ಅದರಲ್ಲಿನ ತಲೆಬರಹ, ಅಸ್ಪಷ್ಟತೆಗಳನ್ನು ವಿಕಿ ಅಪ್ಲೋಡಿಗೆ ಪರಿಗಣಿಸಬಹುದು.
  14. ಸಹಿ, ತಲೆಬರಹಗಳೂ ಚಿತ್ರದ ಭಾಗವೇ ಆಗಿರುವ ಚಾರಿತ್ರಿಕ ಚಿತ್ರಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಬಹುದು.
  15. ಚಿತ್ರಕ್ಕೆ ಸಂಬಂಧಿಕ ಫೋಟೋ ಶ್ರೇಯವನ್ನು ಚಿತ್ರದ ಬಗೆಗಿನ ಮಾಹಿತಿ ಪುಟದಲ್ಲಿ ನೀಡಿರಬೇಕು.

ಚಿತ್ರಗಳ ಹಕ್ಕು ಸ್ವಾಮ್ಯ

ಸಂಪೊಲಿಪುಲೆ

ಚಿತ್ರಗಳನ್ನು ಅಪ್ಲೋಡ್ ಮಾಡುವ ಮೊದಲು ಈ ವಿಷಯಗಳನ್ನು ದೃಢಪಡಿಸಿ:

  • ಚಿತ್ರವು ನಿಮ್ಮ ಸ್ವಂತ ಕೆಲಸ ಆಗಿರಬೇಕು ಅಥವಾ "ಪಬ್ಲಿಕ್ ಡೊಮೆನ್" ನಲ್ಲಿ ಇರಬೇರು ಅಥವಾ ಹಕ್ಕುಸ್ವಾಮ್ಯ ಹೊಂದಿರುವ ಮಾಲೀಕರು GFDL ಪರವಾನಗಿ ಅಡಿಯಲ್ಲಿ ಬಿಡುಗಡೆ ಮಾಡಲು ಒಪ್ಪಿರಬೇಕು.
  • ಹಕ್ಕುಸ್ವಾಮ್ಯದ ಸ್ಥಿತಿಯನ್ನು ತಿಳಿಸುತ್ತಾ ಚಿತ್ರದ ವಿವರಣೆಯ ಒಂದು ಟಿಪ್ಪಣಿ ಸೇರಿಸಿ.
  • ಚಿತ್ರಕ್ಕೆ ಉಲ್ಲೇಖಗಳನ್ನು ನೀಡಿ.
  • ಒಂದುವೇಳೆ ಚಿತ್ರದ ಮಾಲೀಕರು ನೀವು ಆಗಿದ್ದರೆ
    • <<ನಿಮ್ಮ ಹೆಸರು>> **
    • <<ಸೃಷಿಸಿದ ದಿನಾಂಕ >>** ಎಂದು ಬರೆಯಿರಿ ,
  • ಆದರೆ ಕೇವಲ ನಾನು ಸೃಷ್ಟಿಕರ್ತ ಎಂದು ಬರೆಯಬಾರದು.

‘ಪಬ್ಲಿಕ್ ಡೊಮೇನ್’ ಅಡಿಯಲ್ಲಿರುವ ಚಿತ್ರಗಳು ಅನೇಕ ಸ್ಥಳಗಳಲ್ಲಿ ಲಭ್ಯವಿದೆ. ಚಿತ್ರದ ಹಕ್ಕುಸ್ವಾಮ್ಯತೆಯು ಉಲ್ಲಂಘಿಸಲ್ಪಟ್ಟಿದೆ ಎಂದು ನೀವು ಬಲವಾಗಿ ಭಾವಿಸಿದರೆ, ದಯವಿಟ್ಟು ಸಂಬಂಧಿಸಿದ ಪುಟದಲ್ಲಿ ಟೆಂಪ್ಲೇಟ್ ಸೇರಿಸಿ.

ಚಿತ್ರಗಳ ಸದ್ಭಳಕೆ ನಿಯಮ

ಸಂಪೊಲಿಪುಲೆ
  • ಸದ್ಬಳಕೆಯ ನಿಯಮಗಳ ಬಗ್ಗೆ ಪ್ರತ್ಯೇಕ ಪುಟ ಇದೆ. ಅದನ್ನು ನೋಡಿ.
  • ಕೆಲವು ಸಂದರ್ಭದಲ್ಲಿ ನಾವು ಹಕ್ಕುಸ್ವಾಮ್ಯ ಅಡಿಯಲ್ಲಿರುವ ಛಾಯಾಚಿತ್ರಗಳನ್ನು ಬಳಸಬೇಕಾಗುವ ಅಗತ್ಯವಿರುತ್ತದೆ. ಉದಾಹರಣೆಗೆ, ಒಂದು ಪುಸ್ತಕದ ಬಗೆಗಿನ ಲೇಖನವು ಅದರ ಮುಖಪುಟವನ್ನು, ಪಬ್ಲಿಕ್ ಡೊಮೇನ್ ನಲ್ಲಿ ಇಲ್ಲದಿದ್ದರೂ, ಅಥವಾ ಪರವಾನಗಿರಹಿತವಾಗಿದ್ದರೂ ಒಳಗೊಂಡಿರಬೇಕು. ಅದೇ ರೀತಿ ಚಲನಚಿತ್ರ ಪೋಸ್ಟರ್, ಕಂಪನಿ ಲೋಗೋಗಳು, ಸಿಡಿ, ಡಿವಿಡಿ ಕವರ್ ಗಳಿಗೂ ಅನ್ವಯವಾಗುತ್ತದೆ. ಆದರೆ ಸದ್ಭಳಕೆ ನಿಯಮವು ನಿಖರವಾಗಿ ಉಲ್ಲೇಖಿಸಲ್ಪಟ್ಟಿಲ್ಲದಿರುವುರಿಂದ ದುರ್ಬಳಕೆಯ ಅಪಾಯವಿರುತ್ತದೆ.
  • ಕಡಿಮೆ ರೆಸಲ್ಯೂಶನ್ ಚಿತ್ರಗಳನ್ನು ಮಾತ್ರ ಅಪ್ಲೋಡ್ ಮಾಡಬೇಕು. ಏಕೆಂದರೆ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳು ಸದ್ಭಳಕೆ ನಿಯಮದ ಅಡಿಯಲ್ಲಿ ಬರುವುದಿಲ್ಲ. ಒಂದು ವೇಳೆ ಅಂತಹ ಚಿತ್ರಗಳು ನಿಮ್ಮ ಗಮನಕ್ಕೆ ಬಂದರೆ ದಯವಿಟ್ಟು ವರ್ಗ:ಅಳಿಸುವಿಕೆಗೆ ಹಾಕಲಾಗಿರುವ ಚಿತ್ರಗಳು ವರ್ಗಕ್ಕೆ ಸೇರಿಸಿ.

ಸದಸ್ಯರ ಸ್ವಂತ ಚಿತ್ರಗಳು

ಸಂಪೊಲಿಪುಲೆ

ವಿಕಿಪೀಡಿಯದ ಬಳಕೆದಾರರು/ಸಂಪಾದಕರು ತಾವೇ ತೆಗೆದ ಚಿತ್ರಗಳನ್ನು ವಿಕಿಪೀಡಿಯಕ್ಕೆ ಅಪ್ಲೋಡ್ ಮಾಡುವ ಮೊದಲು ಅದು ಈ ಕೆಳಗಿನ ನಿಯಮಗಳನ್ನು ಪಾಲಿಸುವಂತಿರುಬೇಕು

  • ಚಿತ್ರ ಉಚಿತ ಲೈಸನ್ಸಿನಡಿ ಎಲ್ಲರ ಬಳಕೆಗೆ ಮುಕ್ತವಾಗಿರಬೇಕು, ಅಥವಾ
  • GNU Free Documentation License|GFDL ಅಥವಾ ಕ್ರಿಯೇಟಿವ್ ಕಾಮನ್ ಲೈಸನ್ಸ್'ನ್ನು ಹೊಂದಿರಬೇಕು ಅಥವಾ
  • ವಿಕಿಪೀಡಿಯ ಪಬ್ಲಿಕ್ ಡೊಮೈನಿನಲ್ಲಿ ಎಲ್ಲರ ಬಳಕೆಗೆ ಮುಕ್ತ ಎಂದು ಘೋಷಿಸಲ್ಪಟ್ಟಿರಬೇಕು.
  • ಚಿತ್ರವೊಂದರ ಲೈಸನ್ಸ್ ಪಡೆಯುವಾಗ ಅದಕ್ಕೆ GFDL ಮತ್ತು ಕ್ರಿಯೇಟಿವ್ ಕಾಮನ್ಸ್.. ಹೀಗೆ ಹಲವು ವಿಭಾಗಗಳಲ್ಲಿ ಲೈಸನ್ಸ್ ಪಡೆಯಬಹುದು.
  • ಚಿತ್ರದ ಹಕ್ಕು ಆ ಚಿತ್ರವನ್ನು ತೆಗೆದ ವ್ಯಕ್ತಿಗೆ ಇರುತ್ತದೆಯೇ ಹೊರತು ವಸ್ತುವಿಗಲ್ಲ. ಒಬ್ಬ ತೆಗೆದ ಚಿತ್ರವನ್ನು ಮತ್ತೆ ಬಿಡಿಸಿದರೆ ಅದಕ್ಕೆ ಮೂಲ ಚಿತ್ರದ ಕಾಪಿರೈಟ್ ಬರುವುದಿಲ್ಲ. ಅಥವಾ ಹೊಸ ಕಾಪಿರೈಟ್ ಸೃಷ್ಠಿಯಾಗುವುದಿಲ್ಲ. ಚಿತ್ರವೊಂದರ ಸೃಷ್ಠಿಯ ಹಿಂದಿರುವ ಕೌಶಲ್ಯಕ್ಕೆ ಕಾಪಿರೈಟೇ ಹೊರತು ಅದನ್ನು ಸೃಷ್ಠಿಸಲು ಎಷ್ಟು ಸಮಯ ಹಿಡಿಯಿತು ಎಂಬುದಕ್ಕಲ್ಲ. ಮೂರು ಆಯಾಮದ ಚಿತ್ರವೊಂದರ ಸೃಷ್ಠಿಯಲ್ಲಿ ಬಳಕೆಯಾದ ಎರಡು ಆಯಾಮದ ಚಿತ್ರಗಳಿಗೆ ಈಗಾಗಲೇ ಕಾಪಿರೈಟ್ ಇದ್ದರೂ ಸೃಷ್ಠಿಯಾದ ಮೂರು ಆಯಾಮದ ಚಿತ್ರಕ್ಕೆ ಹೊಸ ಕಾಪಿರೈಟ್ ಸಿಗುತ್ತದೆ. ಅದೇ ಮ್ಯೂಸಿಯಮ್ಮಲ್ಲಿರುವ ಎರಡು ಆಯಾಮದ ಚಿತ್ರವನ್ನು ನೋಡಿ ಅದರಂತಹ ಮತ್ತೊಂದು ಎರಡು ಆಯಾಮದ ಚಿತ್ರ ಸೃಷ್ಹಿಸಿದರೆ ಆ ಹೊಸ ಚಿತ್ರಕ್ಕೆ ಕಾಪಿರೈಟ್ ಪ್ರಾಪ್ತವಾಗುವುದಿಲ್ಲ.
  • ಮುಖ್ಯಪುಟ ಅಥವಾ ಲೇಖನದಲ್ಲಿ ನಿಮ್ಮ, ನಿಮ್ಮ ಗೆಳೆಯರ ಅಥವಾ ನಿಮ್ಮ ಕುಟುಂಬದ ಸದಸ್ಯರಿರುವ ಚಿತ್ರವಿದ್ದು ಅದು ಲೇಖನದ ವಿಷಯಕ್ಕೆ ಸಂಬಂಧಪಡದಿದ್ದರೆ ಅಂತಹ ಚಿತ್ರಗಳನ್ನು ಬಳಸುವಂತಿಲ್ಲ. ಈ ವೈಯುಕ್ತಿಕ ಚಿತ್ರಗಳನ್ನು ವ್ಯಕ್ತಿಯ ಸದಸ್ಯಪುಟದಲ್ಲಿ ಬಳಸಬಹುದು. ಮುಖ್ಯಪುಟದಲ್ಲಿ ಈ ತರದ ಚಿತ್ರಗಳ ಬಳಕೆ ಸ್ವಯಂಹೊಗಳಿಕೆಯನ್ನು ಬಿಂಬಿಸುವಂತಾಗಿದ್ದು ವಿಕಿಪೀಡಿಯದ ತತ್ವಗಳಿಗೆ ವಿರುದ್ದವಾಗಿರುತ್ತದೆ. ಇಂತಹ ಚಿತ್ರಗಳನ್ನು ಹಾಕಿದರೆ ಅವುಗಳನ್ನು ಸಮುದಾಯದಲ್ಲಿನ ಚರ್ಚೆಯ ಮೂಲಕ ಅಳಿಸಬಹುದು.

ಕೆಲವೊಂದು ಚಿತ್ರಗಳಿಗೆ ಉಚಿತ ಲೈಸನ್ಸು, ಕಾಪಿರೈಟು ಅಥವಾ ಇನ್ಯಾವುದೇ ಟ್ರೇಡ್ ಮಾರ್ಕುಗಳಿರಬಹುದು. ಅಂತಹವುಗಳನ್ನು {{trademark}}ಟ್ಯಾಗ್ ನಿಂದ ಗುರುತಿಸಿ. ಅದು ಸರಿಯಾಗಿ ಕಾಣದಿದ್ದರೆ Try not to use color alone ಟ್ಯಾಗ್ ಬಳಸಬಹುದು

ಟೆಂಪ್ಲೇಟ್:ಟೆಂಪ್ಲೇಟು:ವಿಕಿಪೀಡಿಯ ಕಾರ್ಯನೀತಿಗಳು ಮತ್ತು ಮಾರ್ಗದರ್ಶನ ಸೂತ್ರಗಳು

ವರ್ಗ:ವಿಕಿಪೀಡಿಯ ಕಾರ್ಯನೀತಿ ಪುಟಗಳು