ತೊಗಲುಗೊಂಬೆಯಾಟ: ಆವೃತ್ತಿಲೆನ ನಡುತ ವ್ಯತ್ಯಾಸೊ

No edit summary
 
೨೦ನೇ ಸಾಲ್:
* ಇವನ್ನು ಬಿಟ್ಟರೆ ರಾಕ್ಷಸೀ ವರ್ಗದ ಹಿಡಿಂಬೆ, ಶೂರ್ಪನಖಿಯರಂಥ ಗೊಂಬೆಗಳು ಪ್ರತ್ಯೇಕವಾಗಿರುತ್ತದೆ. ಸ್ತ್ರೀ ಪಾತ್ರದ ಗೊಂಬೆಗಳು ಹೆಚ್ಚಾಗಿ ನೋಡಲು ಉದ್ದನೆಯ ಮೂಗು, ಅಗಲವಾದ ಕಣ್ಣು, ಜೊತೆಗೆ ಬೈತಲೆ ತೆಗೆದು ಕಟ್ಟಿದ ತುರುಬು, ಅದಕ್ಕೆ ಹೂವು ಮುಡಿಸಿರುತ್ತಾರೆ. ಬೈತಲೆಯಿಂದ ಹಣೆಯ ಮೇಲೆ ಬಿಟ್ಟ ಆಭರಣ, ಕಿವಿಗೆ ಆಭರಣ, ಮೂಗಿಗೆ ಮೂಗುತಿ ಹಾಗೂ ಬುಲಾಕು, ಕೈಬಳೆ ಇತ್ಯಾದಿಗಳಿರುತ್ತವೆ.
 
==ರಂಗಸ್ಥಳ ಮತ್ತುಬೊಕ್ಕ ಆಟ==
* ಸಾಮಾನ್ಯವಾಗಿಸಾಮಾನ್ಯವಾದ್ ಹಳ್ಳಿಗಳು ಇಂತಹ ಮನೋರಂಜನೆ ಏರ್ಪಡಿಸುತ್ತಿದ್ದು ಸುಗ್ಗಿಯ ಕಾಲದಲ್ಲಿ ದುಡಿಮೆಯ ನಂತರ ಫಸಲನ್ನು ಮನೆಯಲ್ಲಿ ತುಂಬಿಕೊಂಡ ಮೇಲೆ ಇಂತಹ ಮನರಂಜನೆಗೆ ತೊಡಗುತ್ತಿದ್ದರು. ಕಲಾವಿದರು ಮೊದಲಿಗೆ ಊರಿನ ಮುಖಂಡರನ್ನೇ ಕಂಡು ಗೊಂಬೆಯಾಟಕ್ಕೆ ಅವಕಾಶ ಮಾಡಿಕೊಡುವಂತೆ ಕೇಳಬೇಕಾಗಿತ್ತು. ಅವರಿಂದ ಅನುಮತಿ ಸುಲಭವಾಗಿ ದೊರಕುತ್ತಿತ್ತು. ಈಡೀ ರಾತ್ರಿ ದೀಪಕ್ಕೆ ಬೇಕಾದ ಎಣ್ಣೆಯ ಖರ್ಚನ್ನು ಅವರೇ ಕೊಡುತ್ತಿದ್ದರು.
* ಅಲ್ಲದೆ ಸಂಭಾವನೆಯ ಜೊತೆಗೆ ಒಂದಿಷ್ಟು ಧವಸ ಧಾನ್ಯವನ್ನು ಊರಿನವರಿಂದ ಸಂಗ್ರಹಿಸಿ ಕೊಡುತ್ತಿದ್ದರು. ಗೊಂಬೆಯಾಟದವರು ಅಲೆಮಾರಿಗಳಾದರು ಕೆಲವರು ಇಂತಿಷ್ಟು ಪ್ರದೇಶವೆಂದು ಹಂಚಿಕೊಂಡು ಅದಕ್ಕೆ ಸೇರಿದ ಹಳ್ಳಿಗಳಲ್ಲಿ ಮಾತ್ರ ಆಟ ಆಡಿಸುತ್ತಿದ್ದರು. ಊರಿನ ಮಧ್ಯಭಾಗದಲ್ಲಿ ವಿಶಾಲವಾದ ಜಾಗವಿರುವಡೆಯಲ್ಲಿ ಆಟದ ಎರ್ಪಾಡು ನಡೆಯುತ್ತದೆ. ಇದೊಂದು ಸಂಚಾರಿ ಕಲೆಯಾದುದರಿಂದ ಸಂಚಾರಕ್ಕೆ ಸುಲಭವಾದ ರಂಗಪರಿಕರಗಳನ್ನು ಹೊಂದಿರುವುದು ಕಂಡು ಬರುತ್ತದೆ.
* ರಂಗಮಂದಿರಕ್ಕೆ ನೆಡುವುದಕ್ಕಾಗಿ ನಾಲ್ಕು ಬಿದಿರುಗಳು, ಮೇಲ್ಬಾಗದಲ್ಲಿ ಕಟ್ಟುವುದಕ್ಕೆ ನಾಲ್ಕು ಬಿದಿರುಗಳು, ಮೇಲ್ಭಾಗ ಮತ್ತು ಗೊಂಬೆಗಳನ್ನು ತೋರಿಸುವ ಭಾಗವನ್ನು ಉಳಿದು ಮಿಕ್ಕ ಮೂರು ಕಡೆಗಳಲ್ಲಿ ಮರೆಮಾಡಲು ಬೇಕಾಗುವ-ಚಾಪೆ, ತಡಿಕೆ, ಗೊಂಬೆಗಳ ಪ್ರದರ್ಶನದ ಭಾಗಕ್ಕೆ ಬೇಕಾಗುವ ಬಿಳಿಯ ಪಂಚೆ ಹಾಗು ಕರಿಯ ಕಂಬಳಿ ಇವಿಷ್ಟಿದ್ದರೆ ತೊಗಲು ಗೊಂಬೆಯಾಟದ ರಂಗಮಂದಿರ ಸಿದ್ದಗೊಳ್ಳುತ್ತದೆ. ಜೊತೆಗೆ ಶುಭದ ಸಂಕೇತವಾಗಿ ಮಾವಿನಸೊಪ್ಪನ್ನು ಕಟ್ಟುವ ಕ್ರಮವೂ ಇದೆ.
* ಕುಳಿತುಕೊಂಡು ಕುಣಿಸುವ ಚಿಕ್ಕದಾದ ಗೊಂಬೆಗಳ ರಂಗಮಂದಿರ ಆರು ಅಡಿ ಎತ್ತರವಿದ್ದು ಎಂಟು ಅಡಿಯಷ್ಟು ಚಚ್ಚೌಕವಾಗಿರುತ್ತದೆ. ರಂಗದ ಮುಂಭಾಗದಲ್ಲಿ ಕೆಳಗಡೆ ಎರಡುವರೆ ಅಡಿಯಷ್ಟು ಕರಿಯ ಕಂಬಳಿಯನ್ನು ಕಟ್ಟುತ್ತಾರೆ . ಮೇಲ್ಭಾಗದಲ್ಲಿ ಇನ್ನುಳಿದ ಜಾಗಕ್ಕೆ ಅಪ್ಪಟ ಬಿಳಿಯ ಬಣ್ಣದ ಪಂಚೆಯನ್ನು ಕಟ್ಟುತ್ತಾರೆ. ಗೊಂಬೆಗಳನ್ನು ಅದರ ಹಿಂಬದಿಯಲ್ಲಿಯೆ ಪ್ರದರ್ಶಿಸುವುದು. ಗೊಂಬೆಗಳನ್ನು ಆಡಿಸುವವರು ಒಳಭಾಗದಲ್ಲಿಯೇ ಕುಳಿತಿದ್ದು ಕರಿ ಕಂಬಳಿಯಿಂದಾಗಿ ಅವರು ಯಾರು ಪ್ರೇಕ್ಷಕರ ಕಣ್ಣಿಗೆ ಬೀಳುವುದಿಲ್ಲ. * ಒಳಗಡೆ ಅದರ ಹಿಂಭಾಗದಲ್ಲಿ ಒಂದು ದೀಪವನ್ನು ತೂಗು ಬಿಟ್ಟರುತ್ತಾರೆ. ಇತ್ತೀಚೆಗೆ ಗ್ಯಾಸ್ ಹಾಗು ಗ್ಯಾಸ್ ಲೈಟಿನ ಬಳಕೆಯೂ ಇದೆ. ಅದರ ಬೆಳಕು ತೊಗಲುಗೊಂಬೆಗಳ ಮೇಲೆ ಬಿದ್ದು ಆ ಗೊಂಬೆಗಳ ಪ್ರತಿಫಲನ ಪಂಚೆಯ ಮೇಲೆ ಅದ್ಭುತವಾಗಿ ಕಾಣಿಸಿ ಕೊಳ್ಳುತ್ತದೆ. ಈ ರೀತಿಯ ರಂಗ ಮಂದಿರ ಚಿಕ್ಕ ಗೊಂಬೆಗಳಿಗೆ ಮಾತ್ರ ಸಾಧ್ಯವಾಗುತ್ತಿತ್ತು.
* ಆಳೆತ್ತರದಆಳೆತ್ತರೊದ ಗೊಂಬೆಗಳಗೊಂಬೆಲೆನ ರಚನೆಯೇ ಬೇರೆ ಇದು ಬಯಲು ಸೀಮೆಯ ಬಯಲಾಟದ ರಂಗಮಂದಿರವನ್ನೇ ಹೆಚ್ಚು ಕಡಿಮೆ ಹೋಲುತ್ತದೆ. ಆಳೆತ್ತರದ ಗೊಂಬೆಗಳನ್ನು ಕುಣಿಸಬೇಕಾದರೆ ಕಲಾವಿದ ನಿಂತುಕೊಳ್ಳಬೇಕಾಗುತ್ತದೆ. ನಿಂತುಕೊಂಡೆ ಸೂತ್ರದ ಗೊಂಬೆಯನ್ನಾಡಿಸುವಂತೆ ಕಡ್ಡಿಯ ಸಹಾಯದಿಂದ ಇದನ್ನು ಆಡಿಸುತ್ತಾನೆ. ಪಾತ್ರವನ್ನು ಕುಣಿಸುವಾಗ ಜೊತೆಯಲ್ಲಿ ತಾನೂ ಕುಣಿಯುತ್ತಾನೆ.
* ಬಯಲಾಟದ ಪಾತ್ರಧಾರಿಗಳಂತೆ ಕಾಲಿಗೆ ಗೆಜ್ಜೆಯನ್ನು ಈತ ಕಟ್ಟಿಕೊಂಡಿರುತ್ತಾನೆ. ಕೆಳಭಾಗದಲ್ಲಿ ಹಲಗೆಗಳನ್ನು ಹಾಸಿಕಟ್ಟಿಯನ್ನು ನಿರ್ಮಿಸುವುದು ವಾಡಿಕೆ. ಇದೆಲ್ಲಾ ಆದ ಬಳಿಕ ಆಡಿಸು ಭಾಗವೊಂದನ್ನು ಬಿಟ್ಟು ಉಳಿದ ಮೂರು ಕಡೆಗಳನ್ನು ಸೋಗೆಯ ಗರಿಯಿಂದಲೋ, ಚಾಪೆ ಅಥವಾ ತಡಿಕೆಯಿಂದಲೋ ಮರೆ ಮಾಡುತ್ತಾರೆ. ಮುಂಭಾಗವನ್ನು ನೀಲಿಯ ಪಂಚೆಯಿಂದ ಮುಚ್ಚುತ್ತಾರೆ. ಉಳಿದೆಲ್ಲಾ ತಂತ್ರವೂ ಕುಳಿತುಕೊಂಡು ಆಡಿಸುವ ಗೊಂಬೆಗಳ ರಂಗ ಮಂದಿರದಂತೆಯೇ ಇರುತ್ತದೆ.
* ವಿಘ್ನೇಶ್ವರನ ಪ್ರಾರ್ಥನೆಯೊಂದಿಗೆ ಆಟ ಪ್ರಾರಂಭವಾಗುತ್ತದೆ. ತೊಗಲು ಗೊಂಬೆಯಾಟವನ್ನು ಆಕರ್ಷಣೀಯವನ್ನಾಗಿ ಮಾಡಿ ಪ್ರೇಕ್ಷಕರನ್ನು ಅಲೌಕಿಕ ಪ್ರಪಂಚಕ್ಕೆ ಕರೆದೊಯ್ಯುವ ಚಮತ್ಕಾರವು ಆಡಿಸುವವನ ಕೈಚಳಕದಲ್ಲಿರುತ್ತದೆ. ಅವನು ಚುರುಕಾಗಿದ್ದಷ್ಟೂ ಕಲೆಗಾರಿಕೆ ಉತ್ತಮವಾಗಿರುತ್ತದೆ. ಆಯಾ ಪಾತ್ರಗಳ ಗುದ್ದುಗಾರಿಕೆಗೆ ಸರಿ ಹೊಂದುವಂತೆ. ಹಾಡನ್ನು ಸಂಭಾಷಣೆಯನ್ನು ಜೊಡಿಸುತ್ತಾ ತನ್ನ ಎರಡೂ ಕೈಗಳಿಂದ ಒಂದೊಂದು ಗೊಂಬೆಯನ್ನು ಹಿಡಿದು ಕುಣಿಸು ರೀತಿ ಅಚ್ಚರಿಯನ್ನು ಉಂಟುಮಾಡುವಂತದ್ದು. * ಯುದ್ದದ ಸಂದರ್ಭ, ಬಾಣವನ್ನು ಬಿಡುವ ಗತ್ತು, ಗಧೆಯನ್ನು ಬೀಸುವ ವೈಖರಿ, ತನ್ನ ಮಾತಿನ ಗತ್ತಿನ ಕ್ರಮಕ್ಕೆ ಸರಿಹೊಂದುವಂತೆ ಕತ್ತು ಕೈಕಾಲುಗಳನ್ನು ಆಡಿಸುವ ರೀತಿ ಇವೆಲ್ಲವೂ ಅಪೂರ್ವವಾದ ದೃಶ್ಯಗಳಂತೆ ತೋರುತ್ತವೆ. ಒಂದು ಪಾತ್ರದ ಪ್ರವೇಶ, ನಿರ್ಗಮನಗಳನ್ನು ಬಹಳ ಚಮತ್ಕಾರಗಳಿಂದ ನಿರ್ವಹಿಸಬೇಕಾಗುತ್ತದೆ.
"https://tcy.wikipedia.org/wiki/ತೊಗಲುಗೊಂಬೆಯಾಟ"ಡ್ದ್ ದೆತ್ತೊಂದುಂಡು