ಹರಿವೆ ಸೊಪ್ಪಿನ ಬಗ್ಗೆ

ಸಂಪೊಲಿಪುಲೆ

ಹರಿವೆ ಸೊಪ್ಪು ಪಲ್ಯ ಊಟಕ್ಕೆ ರುಚಿಕರ, ಲಾಭವೂ ಅಧಿಕ. ಇದರಲ್ಲಿ ಪ್ರೋಟೀನ್‌, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ಹಾಗೂ ಅಗತ್ಯವಾದ ಜೀವಸತ್ವಗಳು, ಮೆಗ್ನಿಸಿಯಮ್, ಸತು ಮತ್ತು ಮ್ಯಾಂಗನೀಸ್‌ ಸಮೃದ್ಧವಾಗಿವೆ. ತಾಮ್ರ ಮತ್ತು ಮ್ಯಾಂಗನೀಸನ್ನು ದೇಹದಲ್ಲಿನ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗಾಗಿ ಬಳಸಲಾಗುತ್ತದೆ. ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ತಾಮ್ರ ಅತ್ಯಗತ್ಯ. ಜೀರ್ಣಕ್ರಿಯೆ ಮತ್ತು ಮಾನವ ದೇಹದ ಬೆಳವಣಿಗೆಗೆ ಸತುವು ಅಗತ್ಯ. ಈ ಎಲ್ಲ ಅಂಶಗಳು ಈ ಸೊಪ್ಪಿನಲ್ಲಿ ಇರುವುದರಿಂದ ಚಳಿಗಾಲದಲ್ಲಿ ಈ ತರಕಾರಿಯನ್ನು ಆರಿಸಿ ಮತ್ತು ಅದರ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಪೋಷಕಾಂಶಗಳು

ಸಂಪೊಲಿಪುಲೆ

ಹರಿವೆ ಸೊಪ್ಪು []ಫೈಟೊನ್ಯೂಟ್ರಿಯೆಂಟ್ಸ್‌ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳ ಉಗ್ರಾಣವಾಗಿದ್ದು, ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತದೊತ್ತಡ ತಗ್ಗಿಸುತ್ತದೆ ಹರಿವೆ ಸೊಪ್ಪಿನಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್‌ ಇಲ್ಲ. ತೂಕವನ್ನು ಕಡಿಮೆ ಮಾಡಲು ಬಯಸುವವರು ಹರಿವೆ ಸೊಪ್ಪಿನ ಪಲ್ಯ ತಿನ್ನುವುದು ಸೂಕ್ತ. ಹರಿವೆ ಸೊಪ್ಪನಲ್ಲಿ ಕರಗಬಲ್ಲ ಮತ್ತು ಕರಗದ ನಾರಿನಂಶವಿದೆ. ಈ ಸೊಪ್ಪನ್ನು ತಿನ್ನುವುದರಿಂದ ನಮ್ಮ ತೂಕವನ್ನು ಕಡಿಮೆಯಾಗುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್‌ ಕಡಿಮೆಗೊಳಿಸುವುದರಿಂದ ಹೃದ್ರೋಗವನ್ನು ನಿವಾರಿಸುತ್ತದೆ. ವೈದ್ಯರು ಮತ್ತು ಪೌಷ್ಟಿಕ ತಜ್ಞರು ತೂಕ ನಿರ್ವಹಣೆ ಅಥವಾ ಅಧಿಕ ರಕ್ತದೊತ್ತಡ ಇರುವವರಿಗೆ ಆಹಾರದಲ್ಲಿಣದಲ್ಲಿ ಹರಿವೆ ಸೊಪ್ಪನ್ನು ಬಳಸಲು ಶಿಫಾರಸು ಮಾಡುತ್ತಾರೆ.

ಹರಿವೆ ಸೊಪ್ಪಿನಲ್ಲಿರುವ ಪೋಷ ಕಾಂಶ

ಸಂಪೊಲಿಪುಲೆ

ಬಿ ವಿಟಮಿನ್‌ ಸಮೃದ್ಧವಾಗಿದೆ ಹರಿವೆ ಸೊಪ್ಪು ಬಿ ಗುಂಪಿನ ಜೀವಸತ್ವಗಳಿಂದ ತುಂಬಿರುತ್ತವೆ. ಫೋಲೇಟ್‌ಗಳು, ರಿಬೋಫ್ಲಾವಿನ್‌, ನಿಯಾಸಿನ್‌, ಥಯಾಮಿನ್‌, ವಿಟಮಿನ್‌ ಬಿ 6 ಈ ಸೊಪ್ಪಿನಲ್ಲಿ ಕಂಡುಬರುತ್ತವೆ. ನವಜಾತ ಶಿಶುಗಳಲ್ಲಿನ ಜನ್ಮ ದೋಷಗಳನ್ನು ತಡೆಗಟ್ಟಲು ಸಹಾಯ ಮಾಡುತ್ತವೆ.

ಆರೋಗ್ಯ ಗುಣ

ಸಂಪೊಲಿಪುಲೆ

ಕೂದಲು ಉದುರಲ್ಲ ಹರಿವೆ ಸೊಪ್ಪು ಲೈಸಿನ್‌ ಹೊಂದಿರುತ್ತದೆ. ಇದು ಅಮೈನೊ ಆಮ್ಲವಾಗಿದ್ದು, ಶಕ್ತಿ ಉತ್ಪಾದನೆ ಮತ್ತು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಗೆ ಅಗತ್ಯ. ಕೂದಲಿನ ಬೆಳವಣಿಗೆ ಮತ್ತು ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ.

ಜೀರ್ಣಿಸಿಕೊಳ್ಳಲು ಸುಲಭ ಅತಿಸಾರ ಮತ್ತು ರಕ್ತಸ್ರಾವಗಳಿಗೆ ಚಿಕಿತ್ಸೆ ನೀಡಲು ಹರಿವೆ ಸೊಪ್ಪುಗಳು ಸಹಾಯಕ. ನಿಯಮಿತ ಹರಿವೆ ಸೊಪ್ಪಿನ ಸೇವನೆ ಜೀರ್ಣಕ್ರಿಯೆಗೆ ಪ್ರಯೋಜನವನ್ನು ನೀಡುತ್ತದೆ.ಹರಿವೆ ಸೊಪ್ಪು ಆರೋಗ್ಯೊಗು ಎಡ್ಡೆ .

  1. https://kn.quora.com/%E0%B2%B9%E0%B2%B0%E0%B2%BF%E0%B2%B5%E0%B3%86-%E0%B2%B8%E0%B3%8A%E0%B2%AA%E0%B3%8D%E0%B2%AA%E0%B3%81-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%A6%E0%B2%82%E0%B2%9F%E0%B2%BF%E0%B2%A8