ಬಳಕೆದಾರೆ:ShettyJyothi/ಎನ್ನ ಕಲ್ಪುನ ಕಳ

CRT Television

thumb|right|೧೯೫೯ರ ಮಾದರಿಯ ಒಂದು ದೂರದರ್ಶನ ಪೆಟ್ಟಿಗೆ

ದೂರದರ್ಶನವು ಚಲಿಸುವ ಚಿತ್ರಗಳನ್ನು ಶಬ್ದದೊಂದಿಗೆ ಪ್ರಸಾರಣೆ ಮಾಡುವ bun ಮತ್ತು ಪ್ರಸಾರಣೆಯನ್ನು ಪ್ರದರ್ಶಿಸುವ ಒಂದು ತಂತ್ರಜ್ಞಾನ. ಪ್ರದರ್ಶನ ಮಾಡುವ ಉಪಕರಣವನ್ನು ದೂರದರ್ಶನ ಪೆಟ್ಟಿಗೆ ಎಂದು ಕರೆಯಲಾಗುತ್ತದೆ.

A flat-screen television

ವಿಶ್ವದಲ್ಲಿ ದೂರದರ್ಶನದ ಉಗಮ

ಸಂಪೊಲಿಪುಲೆ

ಸುಮಾರು 100 ವರ್ಷಗಳವರೆಗೆ ಅಚ್ಚಳಿಯದೇ ಉಳಿಯುವ ದೂರದರ್ಶನ ಆವಿಷ್ಕಾರದ ಇತಿಹಾಸವು ರೇಡಿಯೋಗಿಂತ ಭಿನ್ನವಾಗಿ, ಟೆಲೆವಿಷನ್ ಟೆಕ್ನಾಲಜಿ ಪ್ರಪಂಚದ ವಿವಿಧ ಭಾಗಗಳಲ್ಲಿ ಇಬ್ಬರು ವ್ಯಕ್ತಿಗಳಿಂದ ಸಂಕೀರ್ಣವಾದ, ಹಂತ ಹಂತದ ತಂತ್ರಜ್ಞಾನದ ಸೃಷ್ಟಿಯಾಗಿದೆ. ಪ್ರತೀ ದೇಶದ ದೂರದರ್ಶನ ಸಂಶೋಧನೆಯ ಇತಿಹಾಸವು ತನ್ನದೇ ಆದ ಆವೃತ್ತಿಯನ್ನು ಹೊಂದಿದೆ. ಈ ಪ್ರಕ್ರಿಯೆಯಲ್ಲಿ ಆಯಾ ಭಾಗದ ವಿಜ್ಞಾನಿಗಳ ಭಾಗವಹಿಸುವಿಕೆಯು ಮಹತ್ವದ್ದಾಗಿದೆ. ಪ್ರಾಚೀನ ಕಾಲದಲ್ಲಿ ಜನರು ದೂರದಲ್ಲಿ ಒಂದು ನಿರ್ದಿಷ್ಟ ಚಿತ್ರವನ್ನು ತಿಳಿಸಲು ಪ್ರಯತ್ನಿಸಿದರು, ಇದು ಹಲವಾರು ದಂತ ಕಥೆಗಳು ಮತ್ತು ಪುರಾಣಗಳಿಂದ ದೃಢೀಕರಿಸಲ್ಪಟ್ಟಿದೆ.[]

ದೃಶ್ಯಗಳನ್ನೂ ಧ್ವನಿಗಳನ್ನೂ ಜಂಟಿಯಾಗಿ ಪ್ರಸಾರ ಮಾಡುವ ದೂರದರ್ಶನವೆಂಬ ಮಾಯಾಪೆಟ್ಟಿಗೆಯ ಆವಿಷ್ಕಾರವಾದದ್ದು ಇಪ್ಪತ್ತನೆಯ ಶತಮಾನದಲ್ಲಿ. ದೂರದರ್ಶನದ ಆವಿಷ್ಕಾರದ ಮೊದಲ ಹೆಜ್ಜೆಗಳನ್ನು 1920ರ ದಶಕದಷ್ಟು ಹಿಂದೆ ಗುರುತಿಸಬಹುದು. ಸ್ಕಾಟ್ಲೆಂಡಿನ ಜಾನ್ ಲೋಗಿ ಬೆಯರ್ಡ್ ಎಂಬ ಯುವ ತಂತ್ರಜ್ಞಾನಿ ಶಬ್ದಗಳನ್ನು ಕೊಂಡೊಯ್ಯುವ ರೆಡಿಯೋ ಮೂಲಕ ಚಿತ್ರಗಳನ್ನು ಕಳುಹಿಸುವ ಸಾಧ್ಯತೆ ಬಗ್ಗೆ 1924ರಲ್ಲಿ ಪ್ರಯೋಗಗಳನ್ನು ಆರಂಭಿಸಿದ. ತಿರುಗುವ ತೂತುಗಳಿರುವ ತಟ್ಟೆಯೊಂದನ್ನು ಬಳಸಿಕೊಂಡು ಇವನು ಪ್ರಯೋಗ ಆರಂಭಿಸಿದ. ಇದರಲ್ಲಿ ಚಿತ್ರವನ್ನು ದಾಖಲಿಸಿ ಪ್ರಸಾರ ಮಾಡುವುದು ಸಾಧ್ಯ ಎಂದು ಕಂಡುಬಂದಾಗ 1925ರಲ್ಲಿ ಟೆಲಿಷನ್ ಲಿಮಿಟೆಡ್ ಸಂಸ್ಥೆ ಸ್ಥಾಪಿಸಿದ. ಬಿಬಿಸಿ ಇವನ ತಂತ್ರಜ್ಞಾನವನ್ನು ಒಪ್ಪಿಕೊಂಡಿತು.. 1926ರಲ್ಲಿ ಈತನ ದೂರದರ್ಶನ ಪ್ರಸಾರ ಮಾಡಲು ಬಿಬಿಸಿ ಮುಂದಾಯಿತು. ಇದು ಮೊತ್ತ ಮೊದಲ ತಂತಿರಹಿತ ದೂರದರ್ಶನ ಪ್ರಸಾರ ವ್ಯವಸ್ಥೆಯಾಗಿತ್ತು. 1929ರಲ್ಲಿ ಲಂಡನ್ನಿನಿಂದ ನ್ಯೂಯಾರ್ಕಿಗೆ ಪ್ರಪಥಮ ದೂರದರ್ಶನ ಪ್ರಸಾರ ಮಾಡಲಾಯಿತು. 1920ರ ದಶಕದ ಆರಂಭದಲ್ಲೇ ಚಲಿಸುವ ಚಿತ್ರಗಳಿಗೆ ಧ್ವನಿ ಸಂಯೋಜನೆ ಮಾಡುವ ಪ್ರಯೋಗಗಳು ನಡೆದಿದ್ದವು. 1923ರಷ್ಟು ಹಿಂದೆಯೇ ಡಾ.ವ್ಲಾಡಿಮಿರ್ ಜ್ವೋರಿಕಿನ್ ಎಂಬ ವಿಜ್ಞಾನಿ ಐಕನೋಸ್ಕೋಪ್ ಎನ್ನುವ ವಿದ್ಯುತ್ ಟೆಲಿವಿಷನ್ ಟ್ಯೂಬ್ ಕಂಡುಹಿಡಿದಿದ್ದ. ಇದರಿಂದ ಟೆಲಿವಿಷನ್ ಸೆಟ್ ಅಥವಾ ದೂರದರ್ಶನ ಪೆಟ್ಟಿಗೆಯ ತಯಾರಿಕೆಗೆ ಹಾದಿ ಸುಗಮವಾಯಿತು. ಇದಾದ ಎರಡು ವರ್ಷಗಳ ನಂತರ ಅಮೇರಿಕದಲ್ಲಿ ಜೆನ್‍ಕಿನ್ಸ್‍ನೀಸ್ ಎಂಬುವವನು ದೂರದರ್ಶನ ಪೆಟ್ಟಿಗೆಗಳ ತಯಾರಿಕೆಗೆ ತಳಹದಿ ಹಾಕಿದ. ಬ್ರಿಟೀಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಷನ್ 1936ರಲ್ಲಿ ಸಾರ್ವಜನಿಕರಿಗೆ ದೂರದರ್ಶನ ಪ್ರಸಾರ ಪ್ರಾರಂಭ ಮಾಡಿತು. ಇದಕ್ಕೂ ಮೊದಲೆ, 1930ರಲ್ಲಿ ನ್ಯೂಯಾಕಿನಲ್ಲಿ ನ್ಯಾಷನಲ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಷನ್ ದೂರದರ್ಶನ ಪ್ರಯೋಗಗಳನ್ನು ಆರಂಭಿಸಿತ್ತು. ನಂತರ ಜರ್ಮನಿ, ಫ್ರಾನ್ಸ್ ದೂರದರ್ಶನ ಪ್ರಯೋಗಗಳಲ್ಲಿ ಸೇರಿಕೊಂಡವು. ಎರಟನೆಯ ಮಹಾಯುದ್ಧ ಶುರುವಾದದ್ದೇ ನಾಜಿ ಪಕ್ಷದ ಸಮ್ಮೇಳನಗಳು ದೂರದರ್ಶನದಲ್ಲಿ ಪ್ರಸಾರಗೊಂಡವು. 1936ರಲ್ಲಿ ಬರ್ಲಿನ್‍ನಲ್ಲಿ ನಡೆದ ಒಲಂಪಿಕ್ಸ್ ಪಂದ್ಯಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಯಿತು. ಆ ವೇಳೆಗೆ ವಿಶ್ವದಲ್ಲಿ ಸುಮಾರು ಇಪ್ಪತ್ತು ಸಾವಿರ ದೂರದರ್ಶನ ಸೆಟ್‍ಗಳಿದ್ದವು. 1944ರಲ್ಲಿ ಬಿಬಿಸಿ ತನ್ನ ಎರಡನೇ ಟಿವಿ ಚಾನಲ್ ಪ್ರಾರಂಭಿಸಿತು. ಈ ವಾಹಿನಿ ಮೂಲಕ ಅಂತರ ರಾಷ್ಟ್ರೀಯ ಮಟ್ಟದಲ್ಲಿ ದೂರದರ್ಶನ ಕಾರ್ಯಕ್ರಮಗಳ ವಿನಿಮಯವೂ ಪ್ರಾರಂಭವಾಯಿತು. ಟೆಲಿವಿಷನ್ ಎನ್ನುವುದು ಕಪ್ಪು ಮತ್ತು ಬಿಳಿ ಅಥವಾ ಬಣ್ಣದಲ್ಲಿ ಹಾಗೂ ಎರಡು ಅಥವಾ ಮೂರು ಆಯಾಮಗಳಲ್ಲಿ ಮತ್ತು ಧ್ವನಿಗಳಲ್ಲಿ ಚಲಿಸುವ ಚಿತ್ರಗಳನ್ನು ವರ್ಗಾಯಿಸಲು ಬಳಸಲಾಗುವ ದೂರಸಂವಹನ ಮಾಧ್ಯಮವಾಗಿದೆ. ಈ ಪದವು ಟೆಲೆವಿಷನ್ ಸೆಟ್ ಅಥವಾ ಟೆಲೆವಿಷನ್ ಪ್ರಸಾರದ ಮಾಧ್ಯಮವನ್ನು ಉಲ್ಲೇಖಿಸುತ್ತದೆ. ಟೆಲಿವಿಷನ್ ಎನ್ನುವುದು ಜಾಹೀರಾತು, ಮನರಂಜನೆ, ಕ್ರೀಡೆ ಮತ್ತು ಸುದ್ದಿಗಾಗಿ ಬಳಸುವ ಒಂದು ಸಮೂಹ ಮಾಧ್ಯಮವಾಗಿದೆ. ದೂರದರ್ಶನವನ್ನು ಕಂಡುಹಿಡಿದವರಾರು ಎಂಬ ಪ್ರಶ್ನೆಗೆ ಉತ್ತರ ದೊರಕುವುದು ಸ್ವಲ್ಪ ಕಷ್ಟಾನೇ. 19ನೇ ಶತಮಾನದ ಉತ್ತರಾರ್ಧದಲ್ಲಿ ಒಂದೆರಡು ವಿಜ್ಞಾನಿಗಳು ಪ್ರಮುಖ ಸಂಶೋಧನೆಗಳನ್ನು ಮಾಡಿದರು. 1920ರ ದಶಕದಲ್ಲಿ ಜಪಾನ್, ಬ್ರಿಟನ್, ಜರ್ಮನಿ, ಅಮೇರಿಕಾ ಮತ್ತು ರಷ್ಯಾದಿಂದ 50ಕ್ಕಿಂತ ಹೆಚ್ಚಿನ ಸಂಶೋಧಕರು ಟೆಲೆವಿಷನ್‍ಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದರು. ಅವುಗಳಲ್ಲಿ ಹಲವು ಪ್ರದರ್ಶನಗಳು ಬಹಳ ಭರವಸೆ ನೀಡಿದೆ. ಸ್ಕಾಟೀಷ್ ಇಂಜಿನೀಯರ್ ಜಾನ್ ಲೋಗಿ ಬೈರ್ಡ್ ಎಂಬಾತ ವಿಶ್ವದಲ್ಲೇ ಮೊದಲ ಬಾರಿಗೆ ಯಾಂತ್ರಿಕ ದೂರದರ್ಶನವನ್ನು ನಿರ್ಮಿಸಿ, ಪ್ರದರ್ಶಿಸಿದರು. ಕಪ್ಪು ಮತ್ತು ಬಿಳಿ ಬಣ್ಣದ ದೂರದರ್ಶನದ ಏಕರೂಪದ ಮಾನದಂಡಗಳು 1967ರಲ್ಲಿ ಕಾಣಿಸಿಕೊಂಡವು. ಇಪ್ಪತ್ತನೆ ಶತಮಾನದ ಅತ್ಯಂತ ಪ್ರಮುಖ ಆವಿಷ್ಕಾರಗಳಲ್ಲಿ ಇದು ಒಂದಾಗಿದ್ದು, ಮನರಂಜನೆ ಮತ್ತು ಶಿಕ್ಷಣವನ್ನು ನೀಡುವ ಉತ್ತಮ ಮತ್ತು ಆರೋಗ್ಯಕರ ಸಂವಹನ ಮಾಧ್ಯಮಾಗಿದೆ.

ಭಾರತದಲ್ಲಿ ದೂರದರ್ಶನದ ಆಗಮನ

ಸಂಪೊಲಿಪುಲೆ

ನವದೆಹಲಿಯಲ್ಲಿ 1959ರಲ್ಲಿ ದೇಶದ ಪ್ರಪ್ರಥಮ ಟೆಲಿವಿಷನ್ ಕೇಂದ್ರದ ಸ್ಥಾಪನೆಯಾಯಿತು. ಇದರೊಂದಿಗೆ, ಭಾರತ ಟೆಲಿವಿಷನ್(ದೂರದರ್ಶನ) ಯುಗಕ್ಕೆ ಪದಾರ್ಪಣೆ ಮಾಡಿತು. ಭಾರತದಲ್ಲಿ ಈಗ 133 ದೂರದರ್ಶನ ವಾರ್ತಾವಾಹಿನಿಗಳಿವೆ. 1983ರಲ್ಲಿ ವಿಶ್ವ ಸಂಸ್ಥೆ ವಿಶ್ವ ಸಂವಹನ ವರ್ಷವನ್ನು ಆಚರಿಸಿದಾಗ, ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು, ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಬಡ ರಾಷ್ಟ್ರಗಳ ನಡುವಣ ಅಂತರವನ್ನು ಕಡಿಮೆ ಮಾಡಬೇಕೆಂದು ಆಗ್ರಹಪಡಿಸಲಾಯಿತು. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮುಂದಾಗಬೇಕೆಂಬುದು ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಮೊರೆಯಾಗಿತ್ತು. ಇದಕ್ಕೂ ಮೊದಲೇ, ಅಂದರೆ ಸುಮಾರು ಮೂರು ದಶಕಗಳಿಗೂ ಹಿಂದೆಯೇ ಭಾರತದ ಶೈಕ್ಷಣಿಕ ಹಾಗೂ ಕೈಗಾರಿಕಾ ವಲಯಗಳಲ್ಲಿ ದೂರದರ್ಶನದತ್ತ ಒಲವು ಬೆಳೆಯ ತೊಡಗಿತ್ತು. ಫಿಲಿಪ್ಸ್ ಸಂಸ್ಥೆ ಕೇಂದ್ರ ಸರ್ಕಾರಕ್ಕೆ ದೂರದರ್ಶನ ಪ್ರಸಾರ ಕುರಿತ ಒಂದು ಪ್ರಾತ್ಯಕ್ಷಿಕೆಯನ್ನೂ ತೋರಿಸಿತ್ತು. ಸಮುದಾಯ ಅಭಿವೃದ್ಧಿ ಮತ್ತು ಅನೌಪಚಾರಿಕ ಶಿಕ್ಷಣದಲ್ಲಿ ದೂರದರ್ಶನ ಎಷ್ಟು ಪ್ರಯೋಜನಕಾರಿಯಾದೀತು ಎಂಬ ಪ್ರಯೋಗಶೀಲತೆಯಿಂದ ಕೇಂದ್ರ ಸರ್ಕಾರ ಫಿಲಿಪ್ಸ್ ಸಲಹೆಗೆ ಒಪ್ಪಿಗೆ ನೀಡಿತು. ಸಮುದಾಯ ಕೇಂದ್ರಗಳಿಗಾಗಿ ದೂರದರ್ಶನ ಸೆಟ್‍ಗಳನ್ನು ತೆಗೆದುಕೊಳ್ಳಲು ಯುನೆಸ್ಕೋ 20ಸಾವಿರ ಡಾಲರು ನೆರವು ನೀಡಿತು. ಪ್ರಯೋಗಶೀಲತೆ ಮತ್ತು ಈ ಎಲ್ಲ ಬೆಂಬಲಗಳಿಂದ ಭಾರತದಲ್ಲಿ ದೂರದರ್ಶನ ಪ್ರಾರಂಭವಾಯಿತು. 1959ರ ಸೆಪ್ಟೆಂಬರ್ 15ರಂದು ದೆಹಲಿ ಕೇಂದ್ರದಿಂದ ಮೊದಲ ದೂರದರ್ಶನ ಕಾರ್ಯಕ್ರಮ ಪ್ರಸಾರವಾಯಿತು. ಭಾರತದ ಸಂವಹನ ಕ್ಷೇತ್ರದಲ್ಲಿ ನವ ಅರುಣೋದಯವಾಯಿತು. ದೆಹಲಿ ಕೇಂದ್ರದ ಪ್ರಸಾರ ವ್ಯಾಪ್ತಿ ನಲವತ್ತು ಕಿಲೋಮೀಟರ್ ಆಗಿತ್ತು. ಶುರುವಿಗೆ ವಾರಕ್ಕೆ ಎರಡು ಬಾರಿ ಇಪ್ಪತ್ತು ನಿಮಿಷಗಳ ಅವಧಿಯ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿತ್ತು. ಯುನೆಸ್ಕೊ ಕೊಟ್ಟಿದ್ದ ದೂರದರ್ಶನ ಪೆಟ್ಟಿಗೆಗಳನ್ನು ಹೊಂದಿದ್ದ ಟೆಲಿಕ್ಲಬ್‍ಗಳ ಸದಸ್ಯರುಗಳೇ ಈ ಕಾರ್ಯಕ್ರಮಗಳ ವೀಕ್ಷಕರಾಗಿದ್ದರು. 1965ರಲ್ಲಿ ದೂರದರ್ಶನದಲ್ಲಿ ಸುದ್ದಿ ಸಮಾಚಾರ ಮತ್ತು ಮನರಂಜನೆ ಒದಗಿಸುವ ಕಾರ್ಯಕ್ರಮ ಪ್ರಾರಂಭವಾಯಿತು. ಈ ವರ್ಷದ ಆಗಸ್ಟ್ 15ರಂದು ದೆಹಲಿ ಕೇಂದ್ರದಿಂದ ಪ್ರತಿದಿನ ಒಂದು ಗಂಟೆ ಕಾಲ ಪ್ರಸಾರ ಶುರುಮಾಡಲಾಯಿತು. ಟೆಲಿಕ್ಲಬ್ಗಳಿಗೆಂದೇ ವಿಶೇಷ ಪ್ರಸಾರವನ್ನೂ ಮಾಡಲಾಯಿತು. 1967ರಲ್ಲಿ ರೈತಾಪಿ ವರ್ಗಕ್ಕಾಗಿ ‘ಕೃಷಿದರ್ಶನ’ ವಿಶೇಷ ಕಾರ್ಯಕ್ರಮ ಪ್ರಸಾರ ಆರಂಭವಾಯಿತು. ಈ ಕಾರ್ಯಕ್ರಮ ಅಣುಶಕ್ತಿ ಇಲಾಖೆ, ಕೃಷಿ ಸಂಶೋಧನ ಸಂಸ್ಥೆ ಹಾಗೂ ಹರಿಯಾಣ ಹಾಗೂ ಉತ್ತರ ಪ್ರದೇಶ ಸರ್ಕಾರಗಳ ನೆರವಿನಿಂದ ಸಾಧ್ಯವಾಯಿತು. ದೆಹಲಿ ಕೆಂದ್ರದ ಪ್ರಸಾರ ವ್ಯಾಪ್ತಿಯನ್ನು 60ಕಿ.ಮೀ ಗೆ ವಿಸ್ತರಿಸಲಾಯಿತು. 1970ರ ವೇಳೆಗೆ ದೂರದರ್ಶನ ಪ್ರಸಾರ ಅವಧಿಯನ್ನು ಮೂರು ಗಂಟೆಗಳಿಗೆ ಹೆಚ್ಚಿಸಲಾಯಿತು. ಒಂದು ಅಂದಾಜಿನ ಪ್ರಕಾರ 1970ರ ವೇಳೆಗೆ ಇಪ್ಪತ್ತೆರಡು ಸಾವಿರ ಮನೆಗಳಲ್ಲಿ ಟೆಲಿಕ್ಷಬ್‍ಗಳನ್ನು ಹೊರತುಪಡಿಸಿದ ದೂರದರ್ಶನ ಸೆಟ್‍ಗಳಿದ್ದವು. 1970ರ ಮಧ್ಯಭಾಗದ ವೇಳೆಗೆ ಲಕ್ಷ ಸಂಖ್ಯೆಯಲ್ಲಿ ಟೆಲೆಸೆಟ್‍ಗಳು ಮಾರುಕಟ್ಟೆಗೆ ಹರಿದು ಬರಲಾರಂಭಿಸಿದವು. 1972ರಲ್ಲಿ ಮುಂಬಯಿ ದೂರದರ್ಶನ ಕೇಂದ್ರ ಪ್ರಸಾರ ಪ್ರಾರಂಭಿಸಿತು. ನಂತರ ಶ್ರೀನಗರ, ಅಮೃತಸರ ಮತ್ತು ಪುಣೆ ನಗರಗಳಿಂದ ದೂರದರ್ಶನ ಪ್ರಸಾರ ಪ್ರಾರಂಭವಾಯಿತು. 1975ರಲ್ಲಿ ಕಲ್ಕತ್ತ, ಮದ್ರಾಸ್ ಮತ್ತು ಲಖನೌ ದೂರದರ್ಶನ ಕೆಂದ್ರಗಳಲ್ಲಿ ಪ್ರಸಾರ ಆರಂಭವಾದವು. 1976ರ ಜನವರಿ 1ರಂದ ಭಾರತ ದೂರದರ್ಶನದಲ್ಲಿ ವಾಣಿಜ್ಯ ಜಾಹಿರಾತುಗಳು ಕಾಣಿಸಿಕೊಳ್ಳಲಾರಂಭಿಸಿದವು. ಇದೇ ವರ್ಷ, ಕೆಂದ್ರಸರ್ಕಾರ ದೂರದರ್ಶನವನ್ನು 'ಆಲ್ ಇಂಡಿಯ ರೇಡಿಯೋ' ಆಡಳಿತ ನಿರ್ವಹಣೆಯಿಂದ ಬೇರ್ಪಡಿಸಿತು. 1975-76ರಲ್ಲಿ ಉಪಗ್ರಹ ಶೈಕ್ಷಣಿಕ ಟೆಲಿವಿಷನ್ ಮೂಲಕ ಶೈಕ್ಷಣಿಕ ಪ್ರಸಾರ ಪ್ರಾರಂಭವಾಯಿತು. ಕರ್ನಾಟಕದ ಕೆಲವು ಹಳ್ಳಿಗಳಿಗೂ ಸೇರಿದಂತೆ ಭಾರತದ 2400 ಗ್ರಾಮಗಳಿಗೆ, ಒಂದು ವರ್ಷಕಾಲ ಈ ಕಾರ್ಯಕ್ರಮ ಪ್ರಸಾರ ಮಾಡಲಾಯಿತು. 1977ರಲ್ಲಿ ಜಯಪುರ, ಹೈದರಾಬಾದ್, ಕಲ್ಬುರ್ಗಿ, ರಾಯಪುರ, ಸಂಬಾಲ್ಪುರ ಮತ್ತು ಮುಜಫರ್‍ಪುರ ದೂರದರ್ಶನ ಕೇಂದ್ರಗಳು ಕಾರ್ಯ ಆರಂಭಿಸಿದವು. ಇದರಿಂದಾಗಿ ಟಿವಿ 100 ದಶಲಕ್ಷ ಭಾರತೀಯರನ್ನು ತಲುಪುವುದು ಸಾಧ್ಯವಾಯಿತು. ಇಂದಿನ ದಿನಗಳಲ್ಲಿ ದೇಶದಾದ್ಯಂತ ಪ್ರಮುಖ ಊರುಗಳಲ್ಲಿ ದೂರದರ್ಶನ ಪ್ರಸಾರ ಕೇಂದ್ರಗಳಿದ್ದು ದೇಶವ್ಯಾಪಿ ಜನರು ದೂರದರ್ಶನ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. ಒಂದು ಅಂದಾಜಿನ ಪ್ರಕಾರ 1997ರ ವೇಳೆಗೆ ಭಾರತದಲ್ಲಿ 57.7 ದಶಲಕ್ಷ ಟಿ.ವಿ ಸೆಟ್‍ಗಳಿದ್ದವು. 296 ದಶಲಕ್ಷಕ್ಕೂ ಹೆಚ್ಚು ಮಂದಿ ದೂರದರ್ಶನ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದರು. ದೂರದರ್ಶನ ಸುದ್ದಿ, ಮಾಹಿತಿ, ಕ್ರೀಡೆ, ಸಿನಿಮಾ, ಸಂಗೀತ, ನೃತ್ಯ, ನಾಟಕ, ಜ್ಯೋತಿಷ್ಯ ಮೊದಲಾದ ಕಾರ್ಯಕ್ರಮಗಳ ಜೊತೆಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಸಾರಮಾಡುತ್ತಿದೆ. ಸಾಮನ್ಯ ಶಿಕ್ಷಣ, ವಿಜ್ಞಾನ, ಕೃಷಿ ದರ್ಶನ ಇವು ಶೈಕ್ಷಣಿಕ ಪ್ರಸಾರಕ್ಕೆ ಕೆಲವು ಉದಾಹರಣೆಗಳು. ವಿಶ್ವ ವಿದ್ಯಾನಿಲಯ ಧನ ಸಹಾಯ ಆಯೋಗ 1984ರ ಆಗಸ್ಟ್ ನಿಂದ ದೂರದರ್ಶನದಲ್ಲಿ ತರಗತಿಯ ಪಾಠ ಪ್ರವಚನಗಳನ್ನು ಪ್ರಾರಂಭಿಸಿತು. ವಿದ್ಯಾರ್ಥಿಗಳು ಇದರ ಲಾಭ ಪಡೆಯಲು ಸಾವಿರಾರು ಶಾಲಾ ಕಾಲೇಜುಗಳಿಗೆ ಹಾಗೂ ಸಮುದಾಯ ಕೇಂದ್ರಗಳಿಗೆ ಟಿವಿ ಸೆಟ್‍ಗಳನ್ನು ಒದಗಿಸಲಾಗಿದೆ. ದೂರದರ್ಶನಗಳು ಸಾಮಾಜಿಕ ಜಾಲತಾಣಗಳಿಗೂ ಮೊದಲು ಮಾಧ್ಯಮ ಕ್ಷೇತ್ರವನ್ನು ಆಳುತ್ತಿದ್ದವು. ಇವುಗಳು ಸಮೂಹ ಪ್ರೇಕ್ಷಕರಿಗೆ ಪ್ರಚಲಿತ ವಿದ್ಯಾಮಾನಗಳನ್ನು ಪಸರಿಸುವ ಜೊತೆಜೊತೆಗೆ ಶೈಕ್ಷಣಿಕ ಮಾಹಿತಿ ಮತ್ತು ಮನರಂಜನೆಯನ್ನು ನೀಡುತ್ತಿರುವ ಬಹು ದೊಡ್ಡ ಮಾಧ್ಯಮ. ಏಕ ಕಾಲಕ್ಕೆ ಹೆಚ್ಚು ಜನ ಸಮೂಹವನ್ನು ತಲುಪುವುದು ದೂರದರ್ಶನದ ಬಹು ದೊಡ್ಡ ಶಕ್ತಿ. ಜಗತ್ತು ತಂತ್ರಜ್ಞಾನದ ಕಡೆ ಮುಖ ಮಾಡಿದಾಗ ತನ್ನ ದಿಕ್ಕನ್ನು ಬದಲಾಯಿಸಿಕೊಂಡು ತನ್ನ ಜೊತೆಗೆ ಅನೇಕ ಶಾಖೆಗಳನ್ನು ಸೇರಿಸಿಕೊಂಡು ಸಮೂಹ ಮಾಧ್ಯಮಗಳಾಗಿ ಮಾರ್ಪಟ್ಟವು. ಸಮೂಹ ಮಾಧ್ಯಮಗಳೆಂದರೆ ವಿಶಾಲ ಶ್ರೇಣಿಯ ಜನರ ನಡುವೆ ದೊಡ್ಡ ಪ್ರಮಾಣದಲ್ಲಿ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವುದು. ಮಾಹಿತಿಯನ್ನು ಪರಿಣಾಮಕಾರಿಯಾಗಿ ವೀಕ್ಷಕರಿಗೆ ತಲುಪಿಸುವುದು ದೂರದರ್ಶನದ ಪ್ರಮುಖ ಉದ್ದೇಶಗಳಲ್ಲೊಂದು. ಭಾರತದಲ್ಲಿ ದೂರದರ್ಶನ ಕೇವಲ ಸಮೂಹ ಮಾಧ್ಯಮದ ಭಾಗವಾಗಿರದೇ ಒಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಹಲವಾರು ಭಾಷೆಗಳು ಬೇರೆ ಬೆರೆ ದೇಶೀಯ ಅಂತರಾಷ್ಟ್ರೀಯ ಕಾರ್ಯಕ್ರಮಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಪಡಿಸುತ್ತವೆ.

ಕರ್ನಾಟಕದಲ್ಲಿ ದೂರದರ್ಶನದ ಉಗಮ

ಸಂಪೊಲಿಪುಲೆ

1977ರಲ್ಲಿ ಭಾರತದ ದೂರದರ್ಶನ ನಕ್ಷೆಯಲ್ಲಿ ಕರ್ನಾಟಕ ಮಿಂಚಲು ಆರಂಭಿಸಿತು. ಇದೇ ವರ್ಷ ಸೆಪ್ಟೆಂಬರ್ 3ರಂದು ಕಲ್ಬುಗಿ ದೂರದರ್ಶನ ಕೇಂದ್ರ ಪ್ರಸಾರ ಕಾರ್ಯ ಆರಂಭಿಸಿತು. 1981ರ ಜನವರಿ 1ನೇ ತಾರೀಖು ದೂರದರ್ಶನ ಬೆಂಗಳೂರು ಮಹಾನಗರಕ್ಕೆ ಕಾಲಿಟ್ಟಿತು. ಡಾ.ಅಂಬೇಡ್ಕರ್ ಬೀದಿಯಲ್ಲಿರುವ ವಿಶ್ವೇಶ್ವರಯ್ಯ ಗೋಪುರದ 2ನೇ ಮಹಡಿಯಿಂದ ಬೆಂಗಳೂರು ದೂರದರ್ಶನ ಪ್ರಸಾರ ಕಾರ್ಯ ಆರಂಭಿಸಿತು. 1988ರಲ್ಲಿ ಜಯಚಾಮರಾಜೇಂದ್ರ ನಗರದಲ್ಲಿ ವ್ಯವಸ್ಥಿತ ಸ್ಟುಡಿಯೋ ನಿರ್ಮಾಣವಾಯಿತು. ನಂತರ ಇಲ್ಲಿಂದ ಕಾರ್ಯಕ್ರಮಗಳ ಪ್ರಸಾರದ ಅವಧಿಯನ್ನು ಹೆಚ್ಚಿಸಲಾಯಿತು. 1994ರಲ್ಲಿ ಪ್ರಾರಂಭವಾದ ಡಿ.ಡಿ-9 ಉಪಗ್ರಹ ವಾಹಿನಿಯೆ ಚಂದನ. 2000ದಲ್ಲಿ ಈ ಉಪಗ್ರಹ ವಾಹಿನಿಗೆ ‘ಚಂದನ’ ಎಂದು ನಾಮಕರಣ ಮಾಡಲಾಯಿತು. 1983ರ ರಾಜ್ಯೋತ್ಸವ ದಿನದಂದು ಕನ್ನಡ ವಾರ್ತಾಪ್ರಸಾರ ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಾರಂಭವಾಯಿತು. ಕ್ರಮೇಣ ಬೆಂಗಳೂರು ದೂರದರ್ಶನ ಕೇಂದ್ರದ ಕಾರ್ಯಕ್ರಮಗಳಲ್ಲಿ ವಸ್ತು ವೈವಿಧ್ಯತೆ ಕಂಡು ಬರಲಾರಂಭಿಸಿತು. ದಸರಾ ಉತ್ಸವ, ಕ್ರಿಕೆಟ್ ಪಂದ್ಯಗಳ ನೇರಪ್ರಸಾರ, ಧಾರವಾಹಿಗಳು, ಮಹಿಳೆಯರ ಕಾರ್ಯಕ್ರಮಗಳು, ರೈತರಿಗಾಗಿ ವಿಶೇಷ ಕಾರ್ಯಕ್ರಮಗಳು, ಶ್ರೇಷ್ಠ ಕನ್ನಡ ಸಣ್ಣಕತೆಗಳ ಟಿವಿ ಚಲನಚಿತ್ರಗಳು ಮೊದಲಾದ ಕಾರ್ಯಕ್ರಮಗಳಿಂದ ವಸ್ತು ವೈವಿಧ್ಯತೆ ಹೆಚ್ಚಿತು. ಜೊತೆಗೆ 1995ರ ಮಾರ್ಚ್ 8ರಂದು ‘ಹಲೋ ಸೋದರಿ’ ಕಾರ್ಯಕ್ರಮಗಳೊಂದಿಗೆ ಫೋನ್ ಇನ್ ಕಾರ್ಯಕ್ರಮ ಆರಂಭಿಸಿತು. ಇದು ದ್ವಿಮುಖ ಸಂವಹನೆಯ ಮೊದಲ ಯತ್ನವಾಗಿ ಬೆಂಗಳೂರು ಕೇಂದ್ರದ ಯಶಸ್ಸಿಗೆ ಇನ್ನೊಂದು ಪುಟ ದಾಖಲಾಯಿತು. ಕನ್ನಡ ಕಾರ್ಯಕ್ರಮಗಳನ್ನು ಗ್ರಾಮೀಣ ಜನತೆಯ ಮನೆ ಬಾಗಿಲಿಗೆ ತಲುಪಿಸುವ ಘನೋದ್ದೇಶದಿಂದ 1984ರಲ್ಲಿ ಮಂಗಳೂರು, ದಾವಣಗೆರೆ, ಬಿಜಾಪುರ, ಬಳ್ಳಾರಿ, ಗದಗ, ರಾಯಚೂರು, ಮೈಸೂರು, ಹೊಸಪೇಟೆ, ಬೆಳಗಾವಿಗಳಲ್ಲಿ ಮರುಪ್ರಸಾರ ಕೇಂದ್ರಗಳನ್ನು ಆರಂಭಿಸಲಾಯಿತು. ಮುಂದಿನ ವರ್ಷಗಳಲ್ಲಿ ಹಾಸನ, ತಿಪಟೂರು, ಕೊಡಗು, ಶಿವಮೊಗ್ಗ ನಗರಗಳಿಗೂ ಮರುಪ್ರಸಾರ ಕೇಂದ್ರಗಳ ಭಾಗ್ಯ ಲಭಿಸಿತು. 1994ರ ಸ್ವಾತಂತ್ರ್ಯ ದಿನದಿಂದ ಕರ್ನಾಟಕ ಪ್ರಾದೇಶಿಕ ಪ್ರಸಾರ ಸೇವೆ ಪ್ರಾರಂಭವಾಯಿತು. ಇದರಿಂದಾಗಿ ಸಂಪೂರ್ಣ ಕನ್ನಡ ಕಾರ್ಯಗಳು ಬಿತ್ತರಗೊಳ್ಳುವಂತಾಯಿತು.

ದೂರದರ್ಶನ ತಂತ್ರಜ್ಞಾನ - ಪ್ರಸಾರ ವ್ಯವಸ್ಥೆಗಳು

ಸಂಪೊಲಿಪುಲೆ

ಟೆರೆಸ್ಟ್ರಿಯಲ್ ದೂರದರ್ಶನ

ಸಂಪೊಲಿಪುಲೆ

ಈ ರೀತಿಯ ಪ್ರಸಾರದಲ್ಲಿ, ದೂರದರ್ಶನ ಕೇಂದ್ರಗಳು ಸರ್ಕಾರಗಳು ನಿಯೋಜಿಸಿದ ಆವರ್ತನ ಬ್ಯಾಂಡುಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸರಿಸುತ್ತವೆ. ದೂರದರ್ಶನದ ವೀಕ್ಷಕರು ಆಂಟೆನ್ನಾವನ್ನು ತಮ್ಮ ಮನೆಗಳಲ್ಲಿ ಅಳವಡಿಸಿಕೊಂಡು ಪ್ರಸಾರ ಕೇಂದ್ರದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.[]

ಕೇಬಲ್ ದೂರದರ್ಶನ

ಸಂಪೊಲಿಪುಲೆ

ಈ ರೀತಿಯ ಪ್ರಸಾರದಲ್ಲಿ, ಕಾರ್ಯಕ್ರಮಗಳನ್ನು ಕೋಆಕ್ಸಿಅಲ್ ಕೇಬಲ್ ಅಥವಾ ಫೈಬರ್ ಆಪ್ಟಿಕ್ ಕೇಬಲ್ ಮುಖಾಂತರ ಪ್ರಸರಿಸೂಲಾಗುತ್ತದೆ. ಮೊದಲು ಅನಲಾಗ್ ಮಾದರಿಯಲ್ಲಿ ಸಂದೇಶಗಳನ್ನು ಕೇಬಲ್ ಮುಖಾಂತರ ರವಾನಿಸಲಾಗುತ್ತಿತ್ತು. 2000 ನೇ ಇಸವಿಯ ನಂತರ ಕ್ರಮೇಣ ಡಿಜಿಟಲ್ ಮಾದರಿಯ ಸಂದೇಶಗಳು ಕೇಬಲ್ಲ್ಲಿನ ಮುಖಾಂತರ ದೂರದರ್ಶನ ಪೆಟ್ಟಿಗೆಗೆ ರವಾನಿಸಲು ಶುರುವಾಯಿತು.

ಸ್ಯಾಟಲೈಟ್ ದೂರದರ್ಶನ

ಸಂಪೊಲಿಪುಲೆ

ಅಂತರಿಕ್ಷದಲ್ಲಿ ದೂರದರ್ಶನ, ರೇಡಿಯೋ, ಅಂತರಜಾಲ ಪ್ರಸಾರಣಕ್ಕೆಂದೇ ಹಲವು ಕಮ್ಯುನಿಕೇಷನ್ ಸ್ಯಾಟಲೈಟ್ ಗಳು ಇವೆ. ಈ ಸ್ಯಾಟಲೈಟ್ ಗಳನ್ನು ಉಪಯೋಗಿಸಿ ದೂರದರ್ಶನ ಪ್ರಸರಣ ಮಾಡುವುದನ್ನು ಸ್ಯಾಟಲೈಟ್ ದೂರದರ್ಶನ ಎಂದು ಕರೆಯುತ್ತಾರೆ. ಉದಾಹರಣೆಗೆ - DTH ( ಡೈರೆಕ್ಟ್ ಟು ಹೋಂ ). ಇಂತಹ ವ್ಯವಸ್ಥೆಯಲ್ಲಿ, ಒಂದು ಚಿಕ್ಕದಾದ ಆಂಟೆನಾ ( ಡಿಶ್ ಆಂಟೆನಾ ) ದೂರದರ್ಶನದ ಪ್ರಸರಣ ಸಂದೇಶಗಳನ್ನು ಸ್ವೀಕರಿಸಿ, ದೂರದರ್ಶನದ ಕಾರ್ಯಕ್ರಮಗಳನ್ನು ಪ್ರಸರಿಸುತ್ತದೆ.

ಅಂತರ್ಜಾಲ ದೂರದರ್ಶನ

ಸಂಪೊಲಿಪುಲೆ

ಹಿಂದಿನಿಂದ ಉಪಯೋಗಿಸುತ್ತಿರುವ ಪದ್ಧತಿಗಳಾದ ಟೆರ್ರೆಸ್ಟ್ರಿಯಲ್, ಕೇಬಲ್, ಸ್ಯಾಟಲೈಟ್ ದೂರದರ್ಶನಗಳಿಗೆ ವಿಭಿನ್ನವಾಗಿ, ಅಂತರಜಾಲ ದೂರದರ್ಶನ ಇತ್ತೀಚಿನ ದಿನಗಳಲ್ಲಿ ಬಂದಿದೆ. ದೂರದರ್ಶನದ ಕಾರ್ಯಕ್ರಮಗಳನ್ನು ಲೈವ್ ಆಗಿ ಅಂತರಜಾಲದ ಮೂಲಕ ವೀಕ್ಷಕರಿಗೆ ತಲುಪಿಸಲಾಗುತ್ತದೆ.

ದೂರದರ್ಶನ ತಂತ್ರಜ್ಞಾನ - ದೂರದರ್ಶನ ಉಪಕರಣಗಳು

ಸಂಪೊಲಿಪುಲೆ

CRT ( ಕ್ಯಾಥೋಡೆ ರೇ ಟ್ಯೂಬ್ ) ದೂರದರ್ಶನ

ಸಂಪೊಲಿಪುಲೆ

ಇದು ಅತಿ ಮೊದಲ ದೂರದರ್ಶನ ಉಪಕರಣ. ಈ ರೀತಿಯ ದೂರದರ್ಶನ ಉಪಕರಣದಲ್ಲಿ, ಒಂದು ವ್ಯಾಕ್ಯುಮ್ ಟ್ಯೂಬ್ ನಲ್ಲಿ, ಒಂದು ಅಥವಾ ಅದಕ್ಕಿಂತ ಅಧಿಕ ಎಲೆಕ್ಟ್ರಾನ್ ಗನ್ ಗಳು ( ಎಲೆಕ್ಟ್ರಾನನ್ನು ಉತ್ಪತ್ತಿ ಮಾಡಲು ) ಇರುತ್ತವೆ. ಹಾಗು ಒಂದು ಪ್ರತಿದೀಪಕ ಪರದೆ ಚಿತ್ರವನ್ನು ನೋಡಲು ಇರುತ್ತದೆ. ಸುರಕ್ಷತೆಯ ದೃಷ್ಟಿಯಿಂದ ದೂರದರ್ಶನ ಉಪಕರಣದ ಮುಂದಿನ ಭಾಗವನ್ನು ದಪ್ಪದಾದ ಸೀಸದ ಗಾಜಿನಿಂದ ಮಾಡಲಾಗುತ್ತದೆ. ಇದು ಗಟ್ಟಿಯಾಗಿರುವುದಲ್ಲದೆ, ಕ್ಪ-ಕಿರಣಗಳಿಂದ ಭದ್ರತೆಯನ್ನು ಒದಗಿಸುತ್ತದೆ.

ಪ್ಲಾಸ್ಮಾ ದೂರದರ್ಶನ

ಸಂಪೊಲಿಪುಲೆ

ಈ ದೂರದರ್ಶನ ಉಪಕರಣವು ಸಪಾಟಾಗಿರುತ್ತದೆ. ಇದರಲ್ಲಿ ಸಣ್ಣ ಸಣ್ಣ ಕೋಶಗಳಲ್ಲಿ ಪ್ಲಾಸ್ಮಾ - ವಿದ್ಯುತ್ ಅಯಾನೀಕರಿಸಿದ ಅನಿಲವನ್ನು - ಉಪಯೋಗಿಸುತ್ತಾರೆ. ಇದು ಸ್ವಲ್ಪ ವರ್ಷಗಳ ಮಟ್ಟಿಗೆ ಚಾಲ್ತಿಯಲ್ಲಿತ್ತಾದರೂ, ಈಗ ಈ ಉಪಕರಣವನ್ನು ಯಾರೂ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿಲ್ಲ.

LCD ದೂರದರ್ಶನ

ಸಂಪೊಲಿಪುಲೆ

LCD ದೂರದರ್ಶನವು ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ ತಂತ್ರಜ್ಞಾನವನ್ನು ಉಪಯೋಗಿಸುತ್ತದೆ. ಈ ಉಪಕರಣವು CRT ಉಪಕರಣಕ್ಕಿಂತ ತೆಳ್ಳಗಿದ್ದು, CRT ಗಿಂತ ಹೆಚ್ಚಿನ ಪ್ರದರ್ಶಕ ಗಾತ್ರದಲ್ಲಿ ಲಭ್ಯವಿರುತ್ತದೆ. ಈ ಉಪಕರಣದಲ್ಲಿ, ಹಿಂಬದಿಯಿಂದ ಬೆಳಕಿನ ಮೂಲವಿರುತ್ತದೆ. LCD ದೂರದರ್ಶನದಲ್ಲಿ, ಈ ಬೆಳಕಿನ ಮೂಲ ಪ್ರತಿದೀಪಕ ದೀಪಗಳಾಗಿರುತ್ತವೆ. ಈ ರೀತಿಯ ಉಪಕರಣಗಳು ಜನಪ್ರಿಯತೆ ಪಡೆದಿದ್ದವು. ಆದರೆ ಈ ನಡುವೆ LED ದೂರದರ್ಶನ ಉಪಕರಣಗಳು ಹೆಚ್ಚಿನ ಬಳಕೆಯಲ್ಲಿವೆ. LCD ಉಪಕರಣಗಳ ತಯಾರಿಕೆಯನ್ನು ಬಹಳಷ್ಟು ದೂರದರ್ಶನ ಉತ್ಪಾದಕರು ನಿಲ್ಲಿಸಿದ್ದಾರೆ.

LED ದೂರದರ್ಶನ

ಸಂಪೊಲಿಪುಲೆ

LED ದೂರದರ್ಶನದಲ್ಲಿಯೂ ಸಹ LCD ( ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ ) ತಂತ್ರಜ್ಞಾನವನ್ನು ಉಪಯೋಗಿಸುತ್ತಾರೆ. ಆದರೆ ವ್ಯತ್ಯಾಸವೇನೆಂದರೆ, ಹಿಂಬದಿಯ ಬೆಳಕನ್ನು LED ದೀಪಗಳು ಪೂರೈಸುತ್ತವೆ. ಇದು ಸದ್ಯದ ದಿನಗಳಲ್ಲಿ ಬಹಳಷ್ಟು ಜನಪ್ರಿಯತೆ ಪಡೆದಿದ್ದು, ಬಹುತೇಕ ದೂರದರ್ಶನ ಉಪಕರಣಗಳ ಹಿಂದಿನ ತಂತ್ರಜ್ಞಾನ ಇದೇ ಆಗಿದೆ.[]

OLED ದೂರದರ್ಶನ

ಸಂಪೊಲಿಪುಲೆ

OLED  - ಆರ್ಗಾನಿಕ್ ಲೈಟ್ ಎಮಿಟಿಂಗ್ ಡಯೋಡ್. ಈ ತಂತ್ರಜ್ಞಾನ ಇತ್ತೀಚಿನ ದಿನಗಳಲ್ಲಿ ಬಂದಿದ್ದು, ಇದರಲ್ಲಿ ಆರ್ಗಾನಿಕ್ ಕಾಂಪೌಂಡ್ ನಿಂದ ಮಾಡಿದ ಎಲೆಕ್ಟ್ರೋಲುಮಿನಿಸ್ಸೆಂಟ್ ಪದರವಿರುತ್ತದೆ. ಇದು ವಿದ್ಯುತ್ತಿಗೆ ಅನುಸಾರವಾಗಿ ಬೆಳಕನ್ನು ಹೊರಸೂಸುತ್ತದೆ. ಈ ತಂತ್ರಜ್ಞಾನದಲ್ಲಿ ಹಿನ್ನೆಲೆಯ ಬೆಳಕಿನ ಅವಶ್ಯಕತೆ ಇರುವುದಿಲ್ಲ. ಹೀಗಾಗಿ, ಈ ಉಪಕರಣಗಳಲ್ಲಿ, ಹೆಚ್ಚಿನ ಕಪ್ಪಿನ ಮಟ್ಟ ದೊರೆಯುತ್ತದೆ. ಇದರಿಂದ ಈ ಉಪರಕಣಗಳು ಹೆಚ್ಚಿನ ವ್ಯತಿರಿಕ್ತ ಅನುಪಾತವನ್ನು ( ಕಾಂಟ್ರಾಸ್ಟ್ ರೇಶಿಯೋ ) ಹೊಂದಬಹುದು. ಈ ಕಾರಣ, ಇದರ ಚಿತ್ರದ ಗುಣಮಟ್ಟ ಉತ್ಕೃಷ್ಟವಾಗಿರುತ್ತದೆ.

ದೂರದರ್ಶನ ಉಪಕರಣಗಳ ಪ್ರಮುಖ ತಯಾರಕರು

ಸಂಪೊಲಿಪುಲೆ

ಜಗತ್ತಿನಲ್ಲಿ ದೂರದರ್ಶನ ಉಪಕರಣದ ಹಲವಾರು ತಯಾರಾಕರಿದ್ದು, ಇದರಲ್ಲಿ ಈ ಕೆಳಕಂಡ ತಯಾರಕರು ಪ್ರಮುಖರಾಗಿರುತ್ತಾರೆ.[]

೧. ಸ್ಯಾಂಸಂಗ್

೨. ಎಲ್ ಜಿ ಎಲೆಕ್ಟ್ರಾನಿಕ್ಸ್

೩. ಟಿ ಸಿ ಎಲ್

೪. ಹೈಸೆನ್ಸ್

೫. ಸೋನಿ

೬. ಶಾರ್ಪ್

೭. ಸ್ಕೈ ವರ್ತ್

೮. ಹೈರ್

೯. ಪ್ಯಾನಸೋನಿಕ್

ಭಾರತದ ಪತ್ರಿಕೋದ್ಯಮ ಸಮಗ್ರ ಸಂಪುಟ ಪರಿಷ್ಕ್ರತ- ಜಿ. ಎನ್ ರಂಗನಾಥನ್

* ವರ್ಗ:ಮನೋರಂಜನೆ ವರ್ಗ:ದೂರಸಂಪರ್ಕ ವರ್ಗ:ತಂತ್ರಜ್ಞಾನ

  1. https://newsgeneration.com/broadcast-resources/radio-facts-and-figures/
  2. ೨.೦ ೨.೧ https://en.wikipedia.org/wiki/Television
  3. https://www.mybuyerguide.com/blogs/television/how-does-led-tv-work.html