ಬಳಕೆದಾರೆ:Kishore Kumar Rai/ಎನ್ನ ಕಲ್ಪುನ ಕಳ7
colspan="3" style="text-align: center; font-size:110%; color: black; background-color: ಟೆಂಪ್ಲೇಟ್:Infobox ಬಾಸೆಲೆ ಕುಟುಮ್ಮೊ/family-color;" |ಕನ್ನಡ | ||
---|---|---|
ಬಳಕೆಡುಪ್ಪುನ ಪ್ರದೇಸೊಲು: |
ಕರ್ನಾಟಕ, ಭಾರತ, ಕೇರಳೊಗು ಸೇರ್‌ದ್ ಪೋಯಿನ ಕಾಸರಗೋಡು, ಮಹಾರಾಷ್ಟ್ರ, ಆಂಧ್ರಪ್ರದೇಶ,ತೆಲಂಗಾಣ[೧], ಗೋವಾ, ತಮಿಳುನಾಡು ಮುಂತಾದೆಡೆಗಳಲ್ಲಿಯೂ ಭಾರತದಿಂದ ಹೊರಗಿರುವ ಕೆನಡಾ, ಆಸ್ಟ್ರೇಲಿಯ, ಮಲೇಷಿಯಾ, ಸಿಂಗಾಪುರ,[೨] ಯು.ಕೆ., ಜರ್ಮನಿ, ಹಾಂಗ್ ಕಾಂಗ್, ನ್ಯೂಜಿಲ್ಯಾಂಡ್, ಮೌರೀಷಿಯಸ್,[೩] ಯುನೈಟೆಡ್ ಅರಬ್ ಎಮಿರೇಟ್ಸ್,[೪] ಥಾಯ್‍ಲ್ಯಾಂಡ್.[೫] ಮುಂತಾದೆಡೆಗಳಲ್ಲಿಯೂ ಬದುಕಿರುವ ಜನಗಳು ಕನ್ನಡ ಭಾಷೆಯನ್ನು ಬಳಸುತ್ತಾರೆಂಬುದರ ಬಗ್ಗೆ ಅಧಿಕೃತ ವಿವರಗಳು ಲಭ್ಯವಾಗಿವೆ.[೬] | |
ಒಟ್ಟು ಪಾತೆರುನಕುಲು: |
೬೪ ದಶಲಕ್ಷ (೨೦೧೧), ಇವರಲ್ಲಿ ೫೫ ದಶಲಕ್ಷ ಜನರಿಗೆ ಕನ್ನಡ ಮಾತೃಭಾಷೆಯಾಗಿದೆ.[೭][೮]ಟೆಂಪ್ಲೇಟ್:Infobox ಬಾಸೆ/rank | |
ಭಾಷಾ ಕುಟುಂಬ: | ದ್ರಾವಿಡ ಭಾಷೆಗಳು ದಕ್ಷಿಣ ದ್ರಾವಿಡ ತಮಿಳು - ಕನ್ನಡ[೯] ಕನ್ನಡ – ಬಡಗ ಕನ್ನಡಟೆಂಪ್ಲೇಟ್:Infobox ಬಾಸೆ/official | |
colspan="3" style="text-align: center; color: black; background-color: ಟೆಂಪ್ಲೇಟ್:Infobox ಬಾಸೆಲೆ ಕುಟುಮ್ಮೊ/family-color;" |ಬಾಸೆದ ಸಂಕೇತೊಲು | ||
ISO 639-1: | kn | |
ISO 639-2: | kan | |
ISO/FDIS 639-3: | kanಟೆಂಪ್ಲೇಟ್:Infobox ಬಾಸೆಲೆ ಕುಟುಮ್ಮೊ/map |
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ.[೧೧] ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ೨೦೧೧ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ ೬.೪ ಕೋಟಿ ಜನರು ಕನ್ನಡ ಮಾತನಾಡುತ್ತಾರೆ ಎಂದು ತಿಳಿದುಬಂದಿದೆ. ಇವರಲ್ಲಿ ೫.೫ ಕೋಟಿ ಜನರ ಮಾತೃಭಾಷೆ ಕನ್ನಡವಾಗಿದೆ. ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರದ ಐನೂರು ವರುಷಗಳ ಚರಿತ್ರೆಯಿದೆ. ಕ್ರಿ.ಶ. ಆರನೆಯ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದಲ್ಲಿ [೧೨] ಮತ್ತು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳಗನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ರಾಜಾಶ್ರಯ ಪಡೆಯಿತು.[೧೩][೧೪] ಅದಲ್ಲದೆ ಸಾವಿರ ವರುಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ.[೧೫]ವಿನೋಬಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿಯೆಂದು ಹೊಗಳಿದ್ದಾರೆ.[citation needed]
ಭಾಷಿಕ ಚರಿತ್ರೆ
ಸಂಪೊಲಿಪುಲೆಕನ್ನಡವು ಒಂದು ದ್ರಾವಿಡ ಭಾಷೆಯಾಗಿದೆ. ಕನ್ನಡ ಲಿಪಿ ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ದ್ರಾವಿಡ ಭಾಷಾತಜ್ಞ ಸ್ಟಾನ್‍ಫೋರ್ಡ್ ಸ್ಟೀವರ್ ಅವರ ಅಭಿಪ್ರಾಯದಂತೆ, ಕನ್ನಡದ ಭಾಷಿಕ ಚರಿತ್ರೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು;
- ಹಳಗನ್ನಡ ಕ್ರಿ.ಶ. ೪೫೦ರಿಂದ ಕ್ರಿ.ಶ. ೧೨೦೦ರವರೆಗೆ,
- ನಡುಗನ್ನಡ ಕ್ರಿ. ಶ. ೧೨೦೦ರಿಂದ ಕ್ರಿ.ಶ. ೧೭೦೦ರವರೆಗೆ ಮತ್ತು
- ಹೊಸಗನ್ನಡ ಕ್ರಿ. ಶ. ೧೭೦೦ರಿಂದ ಪ್ರಸ್ತುತ ಕಾಲಘಟ್ಟದವರೆಗೆ.[೧೬]
ಕನ್ನಡ ಭಾಷಾ ಪರಿಣತರು ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಅಭ್ಯಾಸ ಮಾಡಬಹುದಾದ ಕಾಲಮಾನಗಳನ್ನು ಈ ಕೆಳಗಿನಂತೆಯೂ ನಿಷ್ಕರ್ಷಿಸಿದ್ದಾರೆ.
- ಪೂರ್ವದ ಹಳಗನ್ನಡ – ಅನಿಶ್ಚಿತ ಕಾಲಘಟ್ಟದಿಂದ ೭ನೇಯ ಶತಮಾನದವರೆಗೆ;
- ಹಳಗನ್ನಡ – ೭ರಿಂದ ೧೨ನೆಯ ಶತಮಾನದವರೆಗೆ;
- ನಡುಗನ್ನಡ – ೧೨ನೆಯ ಶತಮಾನದ ಪ್ರಾರಂಭದಿಂದ ೧೮ನೆಯ ಶತಮಾನದವರೆಗೆ;
- ಹೊಸಗನ್ನಡ – ೧೮ನೆಯ ಶತಮಾನದ ಆದಿಯಿಂದ ಈಚೆಗೆ.
ಕಳೆದ ಶತಮಾನದಲ್ಲಿ ಎಂದರೆ ೨೦ನೆಯ ಶತಮಾನದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ಬಹಳ ವ್ಯಾಪಕವಾಗಿ ನಡೆಯಿತು. ಕನ್ನಡ ಭಾಷೆಯು ಅಭಿಜಾತ ಭಾಷೆಯೆಂಬ ಸ್ಥಾನಮಾನವನ್ನು ಕೇಂದ್ರ ಸರಕಾರದಿಂದ ಪಡೆದಿದೆ. ಅಂತರಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಛವಾಗಿದೆ. ಕನ್ನಡ ಭಾಷೆ ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯ ಭಾಷೆಯಾಗಿ ಬೆಳೆಯತೊಡಗಿದೆ.
ಕನ್ನಡದಲ್ಲಿ ಸಂಸ್ಕೃತದ ಪ್ರಭಾವ ಅಸಾಧಾರಣವಾದುದು. ಪ್ರಾಕೃತ, ಪಾಳಿ ಮುಂತಾದ ಭಾಷೆಗಳ ಪ್ರಭಾವವೂ ಕನ್ನಡಕ್ಕಿದೆ. ಕ್ರಿ.ಪೂ ಮೂರನೆಯ ಶತಮಾನಕ್ಕೂ ಮುನ್ನವೇ ಕನ್ನಡ ಮೌಖಿಕ ಪರಂಪರೆಯ ಭಾಷೆಯಾಗಿ ರೂಪುಗೊಂಡಿತ್ತೆಂಬುದಕ್ಕೂ ಪ್ರಾಕೃತ ಭಾಷೆಯಲ್ಲಿಯೂ ತಮಿಳು ಭಾಷೆಯಲ್ಲಿಯೂ ಬರೆಯಲ್ಪಟ್ಟ ಶಾಸನಗಳಲ್ಲಿ ಕನ್ನಡದ ಶಬ್ದಗಳು ಬಳಕೆಯಾಗಿವೆಯೆಂದೂ ಇತಿಹಾಸ ತಜ್ಞ ಐರಾವತಂ ಮಹಾದೇವನ್ ಸಾಬೀತುಪಡಿಸಿದ್ದಾರೆ. ಆ ಸಂಶೋಧನೆಯ ಪ್ರಕಾರ ಕನ್ನಡ ಅಗಾಧ ಪ್ರಮಾಣದ ಜನತೆ ಮಾತನಾಡುತ್ತಿದ್ದ ಭಾಷೆಯಾಗಿದ್ದಿತೆಂದೂ ತಿಳಿದುಬಂದಿದೆ.[೧೭][೧೮][೧೯][೨೦][೨೧] ಕೆ.ವಿ. ನಾರಾಯಣರು ಹೇಳುವಂತೆ, ಇಂದಿಗೆ ಕನ್ನಡದ ಉಪಭಾಷೆಗಳೆಂದು ಗುರುತಿಸಲ್ಪಡುವ ಭಾಷೆಗಳಲ್ಲಿ ಹೆಚ್ಚಿನವು ಕನ್ನಡದ ಹಳೆಯ ರೂಪವನ್ನು ಹೋಲುವಂಥದ್ದಾಗಿರಬಹುದು. ಅಲ್ಲದೆ ಅನ್ಯ ಭಾಷೆಗಳ ಪ್ರಭಾವ ವ್ಯಾಪಕವಾಗಿ ಒಳಗಾಗದ ಭಾಷೆಗಳು ಇವೆಂದೂ ಅಭಿಪ್ರಾಯಪಡುತ್ತಾರೆ.[೧೭]
ಸಂಸ್ಕೃತದ ಪ್ರಭಾವ
ಸಂಪೊಲಿಪುಲೆ- ಕನ್ನಡ ಭಾಷೆಗೆ ಪೂರ್ವಕಾಲದಿಂದಲೂ ಮೂರು ಬಗೆಯ ಪ್ರಭಾವಗಳು ಉಂಟಾಗಿವೆ; ಪಾಣಿನೀಯ ಸಂಸ್ಕೃತ ವ್ಯಾಕರಣದ್ದು, ಕಟಂತ್ರ ಮತ್ತು ಶಕಟಯಾನದಂತಹ ಅಪಾಣೀನೀಯ ವ್ಯಾಕರಣಗಳದ್ದು ಹಾಗೂ ಪ್ರಾಕೃತ ವ್ಯಾಕರಣದ್ದು.[೨೨]
- ಪ್ರಾಚೀನ ಕರ್ಣಾಟಕದಲ್ಲಿ ಗ್ರಾಂಥಿಕ ಪ್ರಾಕೃತ ಉಪಯೋಗದಲ್ಲಿತ್ತು ಎಂಬುದಕ್ಕೆ ಪುರಾವೆಗಳಿವೆ. ದೇಶ್ಯ ಪ್ರಾಕೃತವನ್ನು ಮಾತನಾಡುತ್ತಿದ್ದವರು ಮತ್ತು ಕನ್ನಡ ಮಾತನಾಡುತ್ತಿದ್ದವರ ಸಂಪರ್ಕದೊಂದಿಗೆ ಪರಸ್ಪರ ಪೋಷಿಸುತ್ತಲೇ ಬೆಳೆದುವು ಎಂಬುದೂ ಸ್ಪಷ್ಟವಾಗಿದೆ. ಕನ್ನಡ ಉಪಾಸನೆಯ ಮತ್ತು ರಾಜಸತ್ತೆಯ ಭಾಷೆಯಾಗಿ ಉಪಯೋಗಿಸಲ್ಪಡುವ ಮುನ್ನವೇ ಈ ಸಂಪರ್ಕ ಮತ್ತು ತನ್ನಿಮಿತ್ತವಾದ ಕೊಡು ಕೊಳ್ಳುಗೆ ಸಂಭವಿಸಿರಬಹುದು. ಕನ್ನಡದ ಧ್ವನಿಮಾದಲ್ಲಿಯೂ, ಸಂರಚನೆಯಲ್ಲಿಯೂ, ಶಬ್ದಸಂಪತ್ತಿಯಲ್ಲಿಯೂ, ವ್ಯಾಕರಣದಲ್ಲಿಯೂ ಹಾಗೆಯೇ ಭಾಷಿಕ ಪ್ರಯೋಗದಲ್ಲಿಯೂ ಸಂಸ್ಕೃತ ಮತ್ತು ಪ್ರಾಕೃತದ ಪ್ರಭಾವ ಸ್ಪಷ್ಟವಾಗಿದೆ.[೨೨][೨೩]
- ಕನ್ನಡದಲ್ಲಿ ಬಹಳ ಸಾಮಾನ್ಯವಾಗಿ ತತ್ಸಮ ಮತ್ತು ತದ್ಭವ ಶಬ್ದಗಳನ್ನು ಕಾಣುತ್ತೇವೆ. ಕನ್ನಡದ ಬಣ್ಣ ಎಂಬ ಶಬ್ದ ಪ್ರಾಕೃತದ ವಣ್ಣ ಎಂಬ ಶಬ್ದದಿಂದ ಉಂಟಾಯಿತು ಮತ್ತು ಪ್ರಾಕೃತದ ವಣ್ಣ ಎಂಬ ಶಬ್ದ ಸಂಸ್ಕೃತದ ವರ್ಣ ಎಂಬ ಶಬ್ದದಿಂದ ಉಂಟಾಯಿತು. ಕನ್ನಡದ ಹುಣ್ಣಿಮೆ ಎಂಬ ಶಬ್ದ ಪ್ರಾಕೃತದ ಪುಣ್ಣಿವ ಎಂಬ ಶಬ್ದದಿಂದ ಉಂಟಾಯಿತು ಮತ್ತು ಪ್ರಾಕೃತದ ಪುಣ್ಣಿವ ಎಂಬ ಶಬ್ದ ಸಂಸ್ಕೃತದ ಪೌರ್ಣಮಿ ಎಂಬ ಶಬ್ದದಿಂದ ಉಂಟಾದ ತದ್ಭವವಾಗಿದೆ.
[೨೪] ಕನ್ನಡದಲ್ಲಿ ತತ್ಸಮ ಶಬ್ದಗಳು ವ್ಯಾಪಕವಾಗಿ ಉಪಯೋಗಿಸಲ್ಪಡುತ್ತವೆ. ದಿನ, ಕೋಪ, ಸೂರ್ಯ, ಮುಖ, ನಿಮಿಷ, ಅನ್ನ ಎಂಬುವು ಕೆಲ ಉದಾಹರಣೆಗಳು.[೨೫]
ಸಾಹಿತ್ಯ
ಸಂಪೊಲಿಪುಲೆಹಳಗನ್ನಡ
ಸಂಪೊಲಿಪುಲೆತ್ರಿಪದಿ ಛಂಧಸ್ಸಿನಲ್ಲಿ ರಚನೆಗೊಂಡ ಕನ್ನಡದ ಮೊದಲ ಕವಿತೆ ಕ್ರಿ.ಶ. ೭೦೦ರ ಕಪ್ಪೆ ಅರಭಟ್ಟನ ಶಾಸನದಲ್ಲಿ ಕಂಡುಬರುತ್ತದೆ.[೨೬] ರಾಜಾ ನೃಪತುಂಗ ಅಮೋಘ ವರ್ಷ ರಚಿಸಿದ ಕವಿರಾಜಮಾರ್ಗ ಕನ್ನಡದಲ್ಲಿ ರಚನೆಗೊಂಡ ಮೊದಲ ಕೃತಿಯಾಗಿದೆ. ಸಾಹಿತ್ಯ ವಿಮರ್ಶೆಗಳನ್ನೂ ಕಾವ್ಯರಚನೆಯನ್ನೂ ಒಳಗೊಂಡಂಥ ಈ ಕೃತಿ ಆ ಕಾಲದಲ್ಲಿ ಅಸ್ತಿತ್ವದಲ್ಲಿ ಕನ್ನಡದ ಉಪಭಾಷೆಗಳನ್ನು ಒಂದೆಡೆ ಸೇರುವ ಪ್ರಯತ್ನ ಮಾಡಿದೆ. ಈ ಕೃತಿ ಕ್ರಿ.ಶ. ೬ನೆಯ ಶತಮಾನದ ರಾಜ ದುರ್ವಿನೀತನ ಬಗ್ಗೆಯೂ ಕ್ರಿ. ೬೩೬ರ ಐಹೊಳೆ ಶಾಸನ ಬರೆದ ರವಿಕೀರ್ತಿಯ ಬಗ್ಗೆಯೂ ವಿವರಗಳನ್ನು ನೀಡುತ್ತದೆ.[೨೭][೨೮] ಕನ್ನಡದಲ್ಲಿ ಲಭ್ಯವಾಗಿರುವ ಮೊದಲ ಕೃತಿ ವ್ಯಾಕರಣವನ್ನು ವಿವರಿಸುವಂಥದ್ದೂ ವಿವಿಧ ಕನ್ನಡ ಉಪಭಾಷೆಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡುವುದರಿಂದಲೂ ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ ಅದಕ್ಕಿಂತಲೂ ಕೆಲ ಶತಮಾನಗಳ ಹಿಂದೆಯೇ ಆರಂಭಗೊಂಡಿರಬಹುದೆಂದು ಊಹಿಸಬಹುದಾಗಿದೆ.[೨೭][೨೯] ಕ್ರಿ.ಶ. ೯೦೦ರಲ್ಲಿ ಶಿವಕೋಟ್ಯಾಚಾರ್ಯರು ರಚಿಸಿದ ವಡ್ಡಾರಾಧನೆ ಎಂಬ ಗದ್ಯಕೃತಿಯಲ್ಲಿ ಶ್ರವಣಬೆಳಗೊಳದ ಭದ್ರಬಾಹುವಿನ ಕುರಿತಾದ ವಿವರಗಳು ಲಭ್ಯವಾಗುತ್ತವೆ.[೩೦] ಪಂಪನ ಕವಿಯು ಬರೆದ ವಿಕ್ರಮಾರ್ಜುನ ವಿಜಯಂ ಹಾಗೂ ಇನ್ನಿತರ ಕೃತಿಗಳು ಇವೆ.
ನಡುಗನ್ನಡ
ಸಂಪೊಲಿಪುಲೆ- ಹದಿನೈದನೆಯ ಮತ್ತು ಹದಿನೆಂಟನೆಯ ಶತಮಾನದ ನಡುವಣ ಕಾಲ ಕನ್ನಡ ಭಾಷೆ ಮತ್ತು ಸಾಹಿತ್ಯದ ಉಚ್ಛ್ರಾಯ ಕಾಲವಾಗಿತ್ತು. ಆ ಕಾಲದ ಅತ್ಯಂತ ಶ್ರೇಷ್ಠನೆನಿಸಿಕೊಂಡ ಕವಿ ಕುಮಾರವ್ಯಾಸ ಕರ್ಣಾಟ ಭಾರತ ಕಥಾಮಂಜರಿ ಎಂಬ ಕೃತಿಯೊಂದಿಗೆ ವಿಶ್ವವಿಖ್ಯಾತನಾದನು. ಮಹಾಭಾರತವನ್ನು ಆಧರಿಸಿದ ಕೃತಿ ಭಾಮಿನಿ ಷಟ್ಪದಿ ಛಂದಸ್ಸಿನ ಪದ್ಯಗಳನ್ನೊಳಗೊಂಡಿದೆ.[೩೧] ಈ ಕಾಲದಲ್ಲಿ ಕನ್ನಡದ ಮೇಲೆ ಸಂಸ್ಕೃತದ ಧಾರ್ಮಿಕವೂ ಸಾಮಾಜಿಕವೂ ಆದ ಪ್ರಭಾವ ಮೂರ್ಧನ್ಯಾವಸ್ಥೆಯಲ್ಲಿತ್ತು.[೩೨][೩೩][೩೪]
- ಈ ಕಾಲದಲ್ಲಿ ರಾಜ್ಯಾಡಳಿತ ಮತ್ತು ಜಮೀನ್ದಾರಿಗೆ ಸಂಬಂಧಿಸಿದ ಮರಾಠಿ ಮತ್ತು ಹಿಂದಿ ಭಾಷೆಯ ಹಲವಾರು ಶಬ್ದಗಳು ಕನ್ನಡದಲ್ಲಿ ಬಳಕೆಗೆ ಬಂದುವು.[೩೫]
- ಕನಕ ದಾಸರು, ಪುರಂದರ ದಾಸರು, ನರಸಿಂಹ ತೀರ್ಥರು, ವ್ಯಾಸತೀರ್ಥರು, ಶ್ರೀಪಾದ ರಾಯರು, ವಾದಿರಾಜ ತೀರ್ಥರು, ವಿಜಯ ದಾಸರು, ಜಗನ್ನಾಥ ದಾಸರು, ಪ್ರಸನ್ನವೆಂಕಟ ದಾಸರೇ ಮೊದಲಾದ ವೈಷ್ಣವ ಸಂತರು ಕನ್ನಡದಲ್ಲಿ ದಾಸರ ಪದಗಳೆಂದು ಖ್ಯಾತವಾದ ಶ್ರೇಷ್ಠ ಭಕ್ತಿಕಾವ್ಯಗಳನ್ನು ರಚಿಸಿದರು. ಅವುಗಳಲ್ಲಿ ಹೆಚ್ಚಿನವು ಇಂದಿಗೆ ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಿ ಆದರಿಸಲ್ಪಡುವ ಕೃತಿಗಳಾಗಿವೆ.[೩೬] ಕನಕ ದಾಸರ ರಾಮಧಾನ್ಯ ಚರಿತೆ ಎಂಬ ಕೃತಿಯಲ್ಲಿ ಧಾನ್ಯಗಳ ರೂಪಕದೊಂದಿಗೆ ವರ್ಗ ಸಂಘರ್ಷವನ್ನು ಸೂಚಿಸಿರುವುದು ಮನಗಾಣಬಹುದು.[೩೭]
- ಇಲ್ಲಿ ಹೆಸರಿಸಲಾದ ಮತ್ತು ಇತರ ವೈಷ್ಣವ ಸಂತರು / ಹರಿದಾಸರು ತಮ್ಮ ದಾಸಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೂ ಆ ಮೂಲಕ ಕರ್ಣಾಟಕ ಸಂಗೀತಕ್ಕೂ ಶ್ರೇಷ್ಠವೆನಿಸಿದ ಕೊಡೂಗೆಗಳನ್ನು ನೀಡಿದರು. ಇವರಲ್ಲಿ ಅತ್ಯಂತ ಪ್ರಸಿದ್ಧರಾದವರು ಕರ್ಣಾಟಕ ಸಂಗೀತದ ಪಿತಾಮಹ ಎಂದು ಖ್ಯಾತರಾದ ಪುರಂದರದಾಸರು.[೩೮][೩೯][೪೦]
ಹೊಸಗನ್ನಡ
ಸಂಪೊಲಿಪುಲೆ- ಹತ್ತೊಂಬತ್ತನೆಯ ಶತಮಾನದ ನಂತರದ ಕನ್ನಡ ಕೃತಿಗಳ ಭಾಷೆಯಲ್ಲಿ ಗಮನಾರ್ಹ ವ್ಯತ್ಯಯ ಕಂಡುಬಂದಿತು. ಈ ಬಗೆಯಲ್ಲಿ ರೂಪುಗೊಂಡ ಕನ್ನಡ ಭಾಷೆಯನ್ನು ಹೊಸಗನ್ನಡ ಎಂದು ಕರೆಯುತ್ತೇವೆ. ಹೊಸಗನ್ನಡ ಬರಹಗಾರರಲ್ಲಿ ಅತ್ಯಂತ ಪ್ರಮುಖನಾದವನು ಮುದ್ದಣ ಎಂಬ ಕಾವ್ಯನಾಮದೊಂದಿಗೆ ಪ್ರಸಿದ್ಧನಾದ ನಂದಳಿಕೆ ಲಕ್ಷ್ಮಿನಾರಣಪ್ಪ. ಮುದ್ದಣನ ಕಾವ್ಯ ಕನ್ನಡದಲ್ಲಿ ಹೊಸದೊಂದು ಪರಂಪರೆಗೆ ನಾಂದಿಯಾಗಿದ್ದರೂ ಭಾಷಾವಿದಗ್ಧರು ಗುಲ್ವಾಡಿ ವೆಂಕಟರಾಯರು ಬರೆದ ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯವು ಎಂಬ ಕೃತಿಯನ್ನು ಹೊಸಗನ್ನಡದ ಮೊದಲ ಕೃತಿಯನ್ನು ಗುರುತಿಸುತ್ತಾರೆ. ೧೮೧೭ರಲ್ಲಿ ವಿಲಿಯಂ ಕಾರಿ ರಚಿಸಿ ಶ್ರೀರಾಮಪುರದಿಂದ ಪ್ರಕಾಶನಗೊಂಡ ಕಾನರೀಸ್ ವ್ಯಾಕರಣ ಎಂಬ ಕೃತಿ ಕನ್ನಡದಲ್ಲಿ ಮೊದಲ ಬಾರಿಗೆ ಅಚ್ಚುಗೊಂಡ ಕೃತಿಯೆಂಬ ಅಗ್ಗಳಿಕೆಗೆ ಪಾತ್ರವಾಗಿದೆ. *೧೮೨೦ರಲ್ಲಿ ಜೋನ್ ಹಾನ್ಸ್ ಬೈಬಲಿನ ಕನ್ನಡದ ಅನುವಾದವನ್ನು ಪ್ರಕಟಿಸಿದರು.[೪೧]
- ಅಚ್ಚುಗೊಂಡ ಮೊದಲ ಕಾದಂಬರಿ ಪಿಲ್‍ಗ್ರಿಂಸ್ ಪ್ರೋಗ್ರೆಸ್ ಎಂಬ ಕೃತಿಯಾಗಿದೆ. ಕಾನರೀಸ್ ಪ್ರೋವರ್ಬ್ಸ್ (ಕನ್ನಡ ಗಾದೆಗಳು) ಎಂಬ ಕೃತಿಯೂ ಮೇರಿ ಮಾರ್ತ್ ಷೆರ್ವುಡ್ ಬರೆದ ದ ಹಿಸ್ಟರಿ ಆಫ್ ಹೆನ್ರಿ ಅಂಡ್ ಹಿಸ್ ಬೇರರ್ ಎಂಬ ಕೃತಿಯೂ ಕ್ರಿಸ್ತಿಯನ್ ಗೋತ್ಲೋವ್ ಬಾರ್ತನು ಬರೆದ ಬೈಬಲ್ ಸ್ಟೋರೀಸ್ ಮತ್ತು ಕನ್ನಡ ಸ್ತೋತ್ರ ಪುಸ್ತಕ ಇಲ್ಲಿ ಪ್ರಕಾಶನಗೊಂಡವು.[೪೨]
- ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಹಲ ಬಗೆಯ ಚಳುವಳಿಗಳಿಂದ ಪ್ರಭಾವಗೊಂಡಿದೆ. ಇವುಗಳಲ್ಲಿ ಪ್ರಮುಖವಾದುವು ನವೋದಯ. ನವ್ಯ, ನವ್ಯೋತ್ತರ, ದಲಿತ, ಬಂಡಾಯ ಎಂಬಿವುಗಳಾಗಿವೆ. ಪ್ರಸ್ತುತ ಕನ್ನಡ ಸಾಹಿತ್ಯ ಸಮಾಜದ ಎಲ್ಲಾ ವರ್ಗಗಳನ್ನೂ ತಲುಪುತ್ತಲಿದೆ. ಅಷ್ಟಲ್ಲದೆ ಕನ್ನಡದಲ್ಲಿ ಪ್ರಸಿದ್ಧರೂ ಶ್ರೇಷ್ಠರೂ ಆದ ಕುವೆಂಪು, ದ.ರಾ.ಬೇಂದ್ರೆ, ವಿ.ಕೃ. ಗೋಕಾಕ್ ಮುಂತಾದ ಕವಿಗಳೂ ಸಾಹಿತಿಗಳೂ ಬಾಳಿ ಬದುಕಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಎಂಟು ಸಾರಿ ಜ್ಞಾನಪೀಠ ಪುರಸ್ಕಾರ ದೊರೆತಿದೆ.[೪೩]
- ಭಾರತೀಯ ಭಾಷೆಗಳ ಕೃತಿಗಳಿಗೆ ದೊರಕುವ ಜ್ಞಾನಪೀಠ ಪುರಸ್ಕಾರವು ಎಂಟು ಬಾರಿ ಕನ್ನಡ ಭಾಷೆಗೆ ದೊರೆಯಿತು.[೪೪] ಹಲವು ಬಾರಿ ಕೇಂದ್ರ ಸಾಹಿತ್ಯ ಅಕಾದೆಮಿ ಪುರಸ್ಕಾರಗಳೂ ಕನ್ನಡ ಭಾಷೆಗೆ ಲಭ್ಯವಾಗಿವೆ. ದಿಲ್ಲಿಯ ಕೆ. ಕೆ. ಬಿರ್ಲಾ ಫೌಂಡೇಷನ್ ಕೊಡಮಾಡುವ ಸರಸ್ವತಿ ಸಮ್ಮಾನವೂ [೪೫] ಕನ್ನಡ ಭಾಷೆಗೆ ಲಭ್ಯವಾಗಿದೆ. ಎಸ್. ಎಲ್. ಭೈರಪ್ಪನವರ ಮತ್ತು ಶಿವರಾಮ ಕಾರಂತರ ಕೃತಿಗಳು ಭಾರತದ ಹದಿನಾಲ್ಕು ಭಾಷೆಗಳಲ್ಲಿ ಅನುವಾದಗೊಂಡಿವೆ.
ಕನ್ನಡ ಉಪಭಾಷೆಗಳು
ಸಂಪೊಲಿಪುಲೆ- ಬರೆಯಲು ಉಪಯೋಗಿಸುವ ಮತ್ತು ಮಾತನಾಡುವ ಭಾಷೆಯಲ್ಲಿ ಇರುವ ವ್ಯತ್ಯಾಸ ಇತರ ಭಾಷೆಗಳಲ್ಲಿ ಇರುವಂತೆ ಕನ್ನಡದಲ್ಲಿಯೂ ಇದೆ. ಮಾತನಾಡಲು ಉಪಯೋಗಿಸುವ ಕನ್ನಡ ಪ್ರದೇಶಕ್ಕೆ ಅನುಸಾರವಾಗಿ ಬದಲಾಗುತ್ತದೆ. ಆದರೆ ಬರೆಯಲು ಉಪಯೋಗಿಸುವ ಕನ್ನಡ ಕರ್ಣಾಟಕದ ಹೆಚ್ಚಿನ ಎಲ್ಲೆಡೆ ಒಂದೇ ಬಗೆಯದಾಗಿದೆ. ಕುಂದಗನ್ನಡ,ಕೋಟಗನ್ನಡ, ಹವ್ಯಕ ಕನ್ನಡ, ಅರೆಭಾಷೆ (ಗೌಡಕನ್ನಡ), ಸೋಲಿಗ ಕನ್ನಡ ಎನ್ನುವಂಥ ಇಪ್ಪತ್ತರಷ್ಟು ಉಪಭಾಷೆಗಳು ಕನ್ನಡಕ್ಕಿವೆ.[೪೬]
- ಇವುಗಳಲ್ಲಿ ಕುಂದಗನ್ನಡ ಕುಂದಾಪುರದ ಸಮೀಪ ಮಾತನಾಡಲು ಉಪಯೋಗಿಸುವ ಭಾಷೆಯಾಗಿದ್ದು ಇದರಂತೆಯೇ ಹವ್ಯಕ ಮತ್ತು ಸೋಲಿಗ ಕನ್ನಡ ಆಯಾ ಸಮುದಾಯಕ್ಕೆ ಸೇರಿದವರು ಮಾತನಾಡಲು ಉಪಯೋಗಿಸುವ ಭಾಷೆಯಾಗಿದೆ. ಹೀಗೆ ಪ್ರದೇಶಕ್ಕೂ ಸಮುದಾಯಕ್ಕೂ ಅಳವಡಿಸಲ್ಪಟ್ಟ ಇತರ ಕನ್ನಡ ಉಪಭಾಷೆಗಳೆಂದರೆ ನಾಡವ ಕನ್ನಡ, ಮಲೆನಾಡ ಕನ್ನಡ, ಧಾರವಾಡದ ಕನ್ನಡ ಮುಂತಾದುವುಗಳು.
- ಕನ್ನಡದ ಒಂದು ಉಪಭಾಷೆಯಂತೆಯೇ ತೋರಿಬರುವ ಭಾಷೆಯೆಂದರೆ ಬಡಗ ಭಾಷೆ. ಬಡಗ ಭಾಷೆಯನ್ನು ಬರೆಯಲು ಕನ್ನಡ ಲಿಪಿಯನ್ನು ೧೮೯೦ರಲ್ಲೇ ಉಪಯೋಗಿಸಲಾಗುತ್ತಿತ್ತು.[೪೭] ಬಡಗ ಮಾತ್ರವಲ್ಲದೆ ಕನ್ನಡದೊಂದಿಗೆ ನಿಕಟ ಸಾಮ್ಯವನ್ನು ಹೊಂದಿರುವಂಥ ಭಾಷೆಗಳಾಗಿವೆ ಹೊಲಿಯ ಮತ್ತು ಉರಾಳಿ.
ಕನ್ನಡ ಭಾಷೆ ಮತ್ತು ಕನ್ನಡ ಅಂಕೆಗಳ ಬೆಳವಣಿಗೆ
ಸಂಪೊಲಿಪುಲೆ- 'ಕುಮುದೇಂದು ಮುನಿ' ರಚಿಸಿದ 'ಸಿರಿ ಭೂವಲಯ' ಎಂಬ ಗ್ರಂಥದ ಪ್ರಕಾರ ಕನ್ನಡ ಭಾಷೆ ಒಂದು ಗುಪ್ತಭಾಷೆಯಾಗಿದ್ದಿತು (ಬ್ರಹ್ಮರ್ಷಿ ದೇವರಾತರ ಪ್ರಕಾರ ವೇದಕಾಲದಿಂದ ಕನ್ನಡವೂ ಸೇರಿದಂತೆ ೪ ಗುಪ್ತಭಾಷೆಗಳು ಇದ್ದುವು). ಸೊನ್ನೆಯಿಂದಲೇ ಎಲ್ಲಾ ಅಂಕೆಗಳನ್ನು ಮತ್ತು ಅಕ್ಷರಗಳನ್ನು ಸೃಷ್ಟಿಸಲಾಯಿತು ಮತ್ತು ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆಯೆಂದು 'ಕುಮುದೇಂದು ಮುನಿ' ತನ್ನ ಗ್ರಂಥದಲ್ಲಿ ಸಾಬೀತುಪಡಿಸಿದ್ದಾರೆ.
- "ಆದಿ ತೀರ್ಥಂಕರ ವೃಷಭದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಮತ್ತು ಸುಂದರಿಯರಿಗೆ ಕನ್ನಡ ಅಂಕಾಕ್ಷರಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ 'ಬ್ರಾಹ್ಮೀಲಿಪಿ' ಎಂದು ಅಂಕಲಿಪಿಗೆ 'ಸುಂದರಿ ಲಿಪಿ' ಎಂದು ಹೆಸರಾಗಿದೆ. ಈ ವಿಷಯವನ್ನು ಸಿರಿ ಭೂವಲಯವು ಬಹಳ ಸ್ಪಷ್ಟವಾಗಿ ತಿಳಿಸಿದೆ. ಕನ್ನಡ ಭಾಷೆ ಈಗ ವ್ಯಾಪಾರಿ ರಂಗದಲ್ಲೂ ಮುಂಚೂಣಿಯ ಭಾಷೆಯಾಗಿ ಬೆಳೆಯುತ್ತಿದೆ.
ಉದಾಹರಣೆಗೆ:
ಣಿಚ್ಚವು ಹೊಸದಾಗಿರುವಂಕಾಕ್ಷರ ದಚ್ಚುಗಳೊಳಗೊಂಬತ್ತು
ಣೊಚ್ಚಿತ್ತು ಬಿನ್ನತ್ತಾಗಿರುತರುವಂಕದ ಅಚ್ಚಕಾವ್ಯಕೆ ಸೊನ್ನೆಯಾದಿಮ್
ನುಣುಪಾದ ಸೊನ್ನೆಯ ಮಧ್ಯದೊಳ್ ಕೂಡಿಸೆ ಗಣಿತರ್ಗೆ ಲೆಕ್ಕವ ತರುವ
ಅಣಿಯಾದ ಸೊನ್ನೆಗೆ ಮಣಿಯುತ ನಾನೀಗ ಗುಣಕರ್ಗೆ ಭೂವಲಯವನು
ವರುಷಭಾರತದೊಳು ಬೆಳಗುವೆತ್ತಿಹ ಕಾವ್ಯ ಕರುನಾಡ ಜನರಿಗನಾದಿ
ಅರುಹನಾಗಮದೊಂದಿಗೆ ನಯ ಬರುವಂತೆ ವರಕಾವ್ಯವನ್ನು ಕನ್ನದಿಪೆ
ಪುರ ಜಿನನಾಥ ತನ್ನಂಕದೊಳ್ ಬ್ರಾಹ್ಮಿಗೆ ಅರವತ್ನಾಲ್ಕಕ್ಷರವಿತ್ತ
ವರಕುವರಿಯರು ಸೌಂದರಿಗೆ ಒಂಬತ್ತನು ಕರುಣಿಸಿದನು ಸೊನ್ನೆ ಸಹಿತ
ಕನ್ನಡದೊಂದೆರಳ್ ಮೂರುನಾಲ್ಕೈದಾರು ಮುನ್ನ ಏಳೆಂಟೊಂಬತೆಂಬ
ಉನ್ನತವಾದಂಕ ಸೊನ್ನೆಯಿಂ ಹುಟ್ಟಿತೆಂದೆನ್ನುವುದನು ಕಲಿಸಿದನು
ಸರ್ವಜ್ಞದೇವನು ಸರ್ವಾಂಗದಿಂ ಪೇಳ್ದ ಸರ್ವಸ್ವ ಭಾಷೆಯ ಸರಣಿಗೆ
ಸಕಲವ ಕರ್ಮಾಟದಣುರೂಪ ಹೊಂದುತ ಪ್ರಕಟದ ಓಂದರೋಳ್ ಅಡಗಿ
ಹದಿನೆಂಟು ಭಾಷೆಯ ಮಹಾಭಾಷೆಯಾಗಲು ಬದಿಯ ಭಾಷೆಗಳೇಳುನೂರು
ಹೃದಯದೊಳಡಗಿಸಿ ಕರ್ಮಾಟ ಲಿಪಿಯಾಗಿ ಹುದುಗಿದಂಕ ಭೂವಲಯ
ಪರಭಾಷೆಗಳೆಲ್ಲ ಸಂಯೋಗವಾಗಲು ಸರಸ ಶಬ್ದಾಗಮ ಹುಟ್ಟಿ
ಸರವದು ಮಾಲೆಯಾದತಿಶಯ ಹಾರದ ಸರಸ್ವತಿ ಕೊರಳ ಆಭರಣ
ಭೌಗೋಳಿಕ ವ್ಯಾಪಕತೆ
ಸಂಪೊಲಿಪುಲೆ- ಕನ್ನಡ ಭಾಷೆಯನ್ನು ಪ್ರಮುಖವಾಗಿ ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲಾಗುತ್ತಿದೆ ಮತ್ತು ಸ್ವಲ್ಪ ಮಟ್ಟಿಗೆ ಅಕ್ಕಪಕ್ಕದ ರಾಜ್ಯಗಳಲ್ಲಿ (ಕೇರಳ, ಗೋವಾ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಮತ್ತು ಇತರ) ಸಹ ಉಪಯೋಗಿಸಲಾಗುತ್ತದೆ. ಅಮೆರಿಕದ ಸಂಯುಕ್ತ ಸಂಸ್ಥಾನ, ಇಂಗ್ಲೆಂಡ್ ಮತ್ತು ಕೊಲ್ಲಿ ದೇಶಗಳಲ್ಲಿ ಸಹ ಸಾಕಷ್ಟು ಕನ್ನಡಿಗರ ಜನಸಂಖ್ಯೆ ಇದೆ.
- ಇವರಲ್ಲಿ ಹೊರದೇಶಗಳಲ್ಲಿ ವಾಸಿಸುತ್ತಿರುವವರು ಉದ್ಯೋಗ ನಿಮಿತ್ತ ಕರ್ನಾಟಕದಿಂದ ವಲಸೆ ಹೋದವರಾಗಿದ್ದಾರೆ. ಇಂದಿಗೆ ಕೇರಳದಲ್ಲಿರುವ ಕಾಸರಗೋಡು ೧೯೫೬ರ ಭಾಷಾವಾರು ಪ್ರಾಂತ್ಯ ವಿಂಗಡಣೆಗಿಂತ ಪೂರ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿತ್ತು.
ಅಧಿಕೃತ ಮಾನ್ಯತೆ ಮತ್ತು "ಅಭಿಜಾತ ಭಾಷೆ (ಚೆನ್ನುಡಿ)"
ಸಂಪೊಲಿಪುಲೆಸಂಸ್ಕೃತಿ ಸಚಿವಾಲಯ ನೇಮಿಸಿದ ಭಾಷಿಕ ನಿಪುಣರು ಶಿಫಾರಸ್ಸುಗಳನ್ನು ಅನುಮೋದಿಸುತ್ತ ಕೇಂದ್ರ ಸರಕಾರ ಕನ್ನಡ ಭಾಷೆಗೆ ಅಭಿಜಾತ ಭಾಷೆ ಎಂಬ ಗೌರವವನ್ನಿತ್ತು ಆದರಿಸಿತು.[೪೮][೪೯] ಅದಲ್ಲದೆ ಭಾರತದ ಭಾಷೆಗಳಲ್ಲಿ ನಾಲ್ಕನೆಯ ಗೌರವ ಸ್ಥಾನವೂ ಕನ್ನಡಕ್ಕೆ ದೊರೆಯಿತು.[೫೦] ಜುಲೈ 2011ರಲ್ಲಿ ಮೈಸೂರಿನ ಕೇಂದ್ರೀಯ ಭಾರತೀಯ ಭಾಷೆಗಳ ಅಧ್ಯಯನ ಸಂಸ್ಥೆಯಲ್ಲಿ ಅಭಿಜಾತ ಕನ್ನಡದ ಅಧ್ಯಯನಕ್ಕಾಗಿ ಪ್ರತ್ಯೇಕ ಕೇಂದ್ರ ಆರಂಭಗೊಂಡಿತು.[೫೧]
ನಿಘಂಟು
ಸಂಪೊಲಿಪುಲೆಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟನ್ನು ರಚಿಸಿದವರು ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್. ಈ ನಿಘಂಟು ೭೦,೦೦೦ಕ್ಕೂ ಅಧಿಕ ಕನ್ನಡ ಪದಗಳನ್ನು ಒಳಗೊಂಡಿದೆ.[೫೨] ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ ಕನ್ನಡ ಭಾಷೆಯ ಮೂರು ಉಪಭಾಷೆಗಳನ್ನೊಳಗೊಂಡ ಪ್ರಧಾನ ವ್ಯಾಕರಣವನ್ನು ವಿವರಿಸುವ ಗ್ರಂಥವೊಂದನ್ನೂ ರಚಿಸಿದ್ದಾರೆ.[೫೩]
ಹೊಸಗನ್ನಡ ಕಾಲಘಟ್ಟದಲ್ಲಿ ಮೊದಲ ಕನ್ನಡ-ಕನ್ನಡ ನಿಘಂಟು ರಚಿಸಿದವರು ಪ್ರೊ.ಜಿ.ವೆಂಕಟಸುಬ್ಬಯ್ಯ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ೯,೦೦೦ಕ್ಕೂ ಅಧಿಕ ಪುಟಗಳನ್ನೊಳಗೊಂಡ ಈ ನಿಘಂಟು ಒಂಬತ್ತು ಸಂಪುಟಗಳಲ್ಲಿ ಬಿಡುಗಡೆಗೊಂಡಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯನವರು ಕನ್ನಡ-ಇಂಗ್ಲೀಷ್ ನಿಘಂಟನ್ನೂ ಕ್ಲಿಷ್ಟ ಪದಕೋಶ ಎಂಬ ಕನ್ನಡದ ಕ್ಲಿಷ್ಟ ಪದಗಳನ್ನೊಳಗೊಂಡ ನಿಘಂಟನ್ನೂ ರಚಿಸಿದ್ದಾರೆ.[೫೪][೫೫]
ಕನ್ನಡ ಅಕ್ಷರಮಾಲೆ
ಸಂಪೊಲಿಪುಲೆಟೆಂಪ್ಲೇಟ್:ಮುಖ್ಯ ಕನ್ನಡ ಅಕ್ಷರಮಾಲೆಯಲ್ಲಿ ೪೯ ಅಕ್ಷರಗಳಿದ್ದು, ಇದು ಒಂದು ಶಾಬ್ದಿಕ ಅಕ್ಷರಮಾಲೆ. ಕನ್ನಡ ಅಕ್ಷರಮಾಲೆಯಲ್ಲಿ ಬರುವ ಅಕ್ಷರಗಳು ಸರಿ ಸುಮಾರು ಎಲ್ಲಾ ಭಾರತೀಯ ಭಾಷೆಗಳಲ್ಲಿ ಬರುತ್ತವೆ. ತೆಲುಗು ಲಿಪಿಗೆ ಕನ್ನಡ ಲಿಪಿಯೊಂದಿಗೆ ನಿಕಟವಾದ ಹೋಲಿಕೆಯಿದೆ ಮತ್ತು ಈ ಎರಡು ಲಿಪಿಗಳ ಮೂಲ ಒಂದೇ ಆಗಿದೆ. ಕನ್ನಡ ಮತ್ತು ತೆಲುಗು ಲಿಪಿಗಳೆರಡೂ ಕದಂಬ ಲಿಪಿಯಿಂದ ರೂಪುಗೊಂಡಂಥವು. ಕನ್ನಡ ಲಿಪಿ ಒತ್ತಕ್ಷರ ಹಾಗೂ ಕಾಗುಣಿತಗಳ ದೆಸೆಯಿಂದ ಸಾಕಷ್ಟು ಸಂಕೀರ್ಣವಾದದ್ದು. ಕನ್ನಡ ಬರವಣಿಗೆಯ ಪ್ರತಿ ಚಿಹ್ನೆ ಒಂದು ಶಾಬ್ದಿಕ ಮಾತ್ರೆಯನ್ನು ಪ್ರತಿನಿಧಿಸುತ್ತದೆ. ಇಂಗ್ಲೀಷಿನಂಥ ಭಾಷೆಗಳಲ್ಲಿ ಒಂದು ಚಿಹ್ನೆ ಒಂದು ಶಬ್ದವನ್ನು ಮಾತ್ರ ಪ್ರತಿನಿಧಿಸುತ್ತದೆ. ಮಾನವನು ತಿಳಿಸಬೇಕಾದ ಅರ್ಥಕ್ಕೆ ಭಾಷೆ ಸಂಕೇತವಾದರೆ, ಭಾಷೆಗೆ ಲಿಪಿ ಸಂಕೇತವಾಗುತ್ತದೆ. ಚಿತ್ರ ಲಿಪಿಯಿಂದ ಹಿಡಿದು ಇಂದಿನ ಮುದ್ರಣ ಮತ್ತು ಕಂಪ್ಯೂಟರ್ ಲಿಪಿಯವರೆಗೆ ಲಿಪಿಗಳು ಬೆಳೆದಿವೆ. ಭಾರತದಲ್ಲಿರುವ ಅನೇಕ ಭಾಷಾಲಿಪಿಗಳಿಗೂ ಅಶೋಕನ ಶಾಸನಗಳಲ್ಲಿ ವ್ಯಾಪಕವಾಗಿ ಬಳಕೆಯಾಗಿರುವ ಬ್ರಾಹ್ಮಿ ಲಿಪಿಯೇ ಮೂಲ. ಕನ್ನಡದ ಅಕ್ಷರ ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಬಗೆಯನ್ನು ವಿಸ್ತೃತ ಅಧ್ಯಯನಗಳು ನಡೆದಿವೆ. ವಿದ್ವಾಂಸರು ಈ ಬಗ್ಗೆ ವರ್ಣಮಾಲೆಯ ಪಟಗಳನ್ನು ರಚಿಸಿ ಶತಮಾನಗಳ ಅಕ್ಷರ ಸ್ವರೂಪಗಳನ್ನು ಗುರುತಿಸಿದ್ದಾರೆ. ಇಂಥ ಅಧ್ಯಯನಗಳ ಸಹಾಯದೊಂದಿಗೆ ಅಕ್ಷರಗಳು ಮಾರ್ಪಟ್ಟ ಬಗೆಯನ್ನು ಕಂಡರಿಯಲು ಸಾಧ್ಯವಿದೆ. ಮುದ್ರಣದ ಆರಂಭದೊಂದಿಗೆ ಕನ್ನಡ ಲಿಪಿಗೆ ಈಗಿನ ರೂಪ ನೆಲೆನಿಂತಿರುವುದು ಗಮನಾರ್ಹ. ಪ್ರಪಂಚದಲ್ಲಿರುವ ೧೮ ಬಗೆಯ ಲಿಪಿಗಳಲ್ಲಿ ೮ ಅಕ್ಷರ ಲಿಪಿಗಳು. ಉಳಿದಂತೆ ಚಿತ್ರಲಿಪಿಯೇ ಮುಂತಾದುವುಗಳನ್ನು ಕಾಣಬಹುದು. ಭಾರತದಲ್ಲಿ ಅನೇಕ ಭಾಷೆಗಳವು ಬ್ರಾಹ್ಮಿಲಿಪಿಯಿಂದ ರೂಪುಗೊಂಡ ಲಿಪಿಗಳಾಗಿವೆ. ಪಾರ್ಸೋ-ಅರಬ್ಬಿ ಲಿಪಿಗಳೂ ಭಾರತದಲ್ಲಿ ರೂಢಿಯಲ್ಲಿವೆ. ಉದಾ: ಉರ್ದು, ಕಾಶ್ಮೀರಿ ಮತ್ತು ಪುಷ್ತು.
ಕನ್ನಡ ವರ್ಣಮಾಲೆಯಲ್ಲಿ ಇರುವ ಲಿಪಿ ಸಂಜ್ಞೆಗಳು ಇವು:
|
|
ಅವರ್ಗೀಯ ವ್ಯಂಜನಗಳು | ||||||||||||||
---|---|---|---|---|---|---|---|---|---|---|---|---|---|---|
ಅವರ್ಗೀಯ ವ್ಯಂಜನಗಳು | ಯ | ರ | ಲ | ವ | ಶ | ಷ | ಸ | ಹ | ಳ |
ಹೀಗೆ ಒಟ್ಟು ೪೯ ವರ್ಣಗಳು ಕನ್ನಡದಲ್ಲಿರುವಂಥವು.
ವರ್ಣ ವಿಂಗಡಣೆ
ಸಂಪೊಲಿಪುಲೆವಿಭಜಿಸಲು ಸಾಧ್ಯವಿಲ್ಲದ ಧ್ವನಿಯನ್ನು ವರ್ಣವೆನ್ನಲಾಗುತ್ತದೆ ಮತ್ತು ಭಾಷೆಯ ಅತ್ಯಂತ ಕಿರಿಯ ಅಂಶವನ್ನು ಸ್ವರವೆಂದು ಕರೆಯಲಾಗುತ್ತದೆ. (ಉದಾಃ ವಸ್ತ್ರ = ವ್+ಅ+ಸ್+ತ್+ರ್+ಅ) ಸ್ವತಂತ್ರವಾಗಿ ಉಚ್ಚರಿಸಬಹುದಾದ ವರ್ಣಗಳನ್ನು ಸ್ವರಗಳೆಂದೂ ಇತರ ವರ್ಣಗಳ ಸಹಾಯದಿಂದ ಉಚ್ಚರಿಸಬಹುದಾದ ವರ್ಣಗಳನ್ನೂ ವ್ಯಂಜನಗಳೆಂದೂ ಕರೆಯಲಾಗುತ್ತದೆ.
ಸ್ವರಗಳ ವಿಧಗಳು
ಸಂಪೊಲಿಪುಲೆ- ಸ್ವರಗಳನ್ನು ಅವುಗಳ ಉಚ್ಚಾರಣೆಗೆ ತೆಗೆದುಕೊಳ್ಳುವ ಕಾಲಾವಧಿಯನ್ನು ಅವಲಂಬಿಸಿ ಹ್ರಸ್ವಸ್ವರಗಳು, ಮತ್ತು ದೀರ್ಘಸ್ವರಗಳು ಎಂದು ಎರಡು ಗುಂಪುಗಳನ್ನಾಗಿ ಮಾಡಲಾಗಿದೆ.
- ಹ್ರಸ್ವ ಸ್ವರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಛಂದಸ್ಸಿನಲ್ಲಿ ಒಂದು ಮಾತ್ರೆಯ ಕಾಲ ಎಂದು ಕರೆಯಲಾಗಿದೆ.
ಉದಾಹರಣೆಗೆ: ಅ, ಇ, ಉ, ಋ, ಎ, ಒ.
- ದೀರ್ಘಸ್ವರಗಳ ಉಚ್ಚಾರಣೆಗೆ ಎರಡು ಮಾತ್ರೆಗಳ ಕಾಲವನ್ನು ತೆಗೆದುಕೊಳ್ಳುತ್ತೇವೆ.
ಉದಾಹರಣೆಗೆ: ಆ, ಈ, ಊ, ೠ, ಏ, ಐ, ಓ, ಔ.
- "ಋ"ಕಾರವನ್ನು ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವ ಪದಗಳಲ್ಲಿ ಮಾತ್ರ ಕಾಣುತ್ತೇವೆ.
ಉದಾಹರಣೆಗೆ: ಋಷಿ, ಋಜುವಾತು, ಋಣ, ಋತುಮಾನ.
- "ಐ" ಮತ್ತು "ಔ"ಗಳ ಸ್ವರೂಪ:
ಮೇಲಿನ ವರ್ಣಗಳು ಎರಡು ವಿಭಿನ್ನ ಸ್ವರಗಳ ಸಂಯೋಗದಿಂದ ಉಂಟಾಗುತ್ತವೆ. ಅ ಮತ್ತು ಇ ಸ್ವರಗಳ ಸಂಧಿಯಲ್ಲಿ "ಐ"ಕಾರವು ಉಂಟಾಗಿದ್ದು, ಅ ಮತ್ತು ಉ ಸ್ವರಗಳಿಂದ "ಔ"ಕಾರವು ಜನಿಸಿದೆ. ಈ ಎರಡು ಸ್ವರಗಳು ವಿಜಾತೀಯ ಸ್ವರಗಳ ಸಂಧಿಯಿಂದ ಆಗಿದ್ದು, ತಮ್ಮ ದೀರ್ಘ ಸ್ವರೂಪದಿಂದಲಾಗಿ ದೀರ್ಘಸ್ವರಗಳ ಪಟ್ಟಿಗೆ ಸೇರುತ್ತವೆ.
ವ್ಯಂಜನದ ವಿಧಗಳು
ಸಂಪೊಲಿಪುಲೆವ್ಯಂಜನಗಳನ್ನು ಉಚ್ಚಾರಣೆಯ ಆಧಾರದ ಮೇಲೆ "ಕ್"ನಿಂದ "ಮ್"ಕಾರದ ವರೆಗಿನ ಇಪ್ಪತ್ತೈದು ವರ್ಣಗಳನ್ನು ವರ್ಗೀಯ ವ್ಯಂಜನಗಳೆಂದು ಕರೆಯುತ್ತೇವೆ.
- ಕ ಖ ಗ ಘ ಙ;
- ಚ ಛ ಜ ಝ ಞ;
- ಟ ಠ ಡ ಢ ಣ;
- ತ ಥ ದ ಧ ನ;
- ಪ ಫ ಬ ಭ ಮ.
"ಯ" ಕಾರದಿಂದ "ಳ" ಕಾರದ ವರೆಗಿನ ವ್ಯಂಜನಗಳನ್ನು ಅವರ್ಗೀಯ ವ್ಯಂಜನಗಳೆನ್ನುತ್ತೇವೆ.
- ಯ ರ ಲ ವ ಶ ಷ ಸ ಹ ಳ.
ಲಿಪ್ಯಂತರಣ
ಸಂಪೊಲಿಪುಲೆಕನ್ನಡ ಅಕ್ಷರಗಳನ್ನು ಗಣಕಯಂತ್ರದಲ್ಲಿ ಸಾಮಾನ್ಯ ಕೀಲಿಮಣೆಯ ಮೂಲಕ ಮೂಡಿಸಲು ಅನೇಕ ಲಿಪ್ಯಂತರಣ ವಿಧಾನಗಳಿವೆ. ಇವುಗಳಲ್ಲಿ ಕೆಲವೆಂದರೆ INSCRIPT, ITRANS, ಬರಹ ಮತ್ತು ನುಡಿ. ಕರ್ನಾಟಕ ಸರ್ಕಾರದ ಅಧಿಕೃತ ಲಿಪ್ಯಂತರಣ ವಿಧಾನ ನುಡಿ. INSCRIPT ಶಿಷ್ಟಾಚಾರವನ್ನು ವಿಂಡೋಸ್ ಹಾಗೆಯೇ GNOME ಬಳಸುವ ಎಲ್ಲಾ ಕಾರ್ಯಾಚರಣೆ ವ್ಯವಸ್ಥೆಗಳೂ ಗುರುತು ಹಿಡಿಯುತ್ತವೆ.ಇದನ್ನು ಸಿದ್ಧಪಡಿಸಿಕೊಟ್ಟವರು ಕೆ. ಪಿ. ರಾವ್ರವರು.
ಕನ್ನಡ ಅಂಕೆಗಳು
ಸಂಪೊಲಿಪುಲೆಕನ್ನಡ ಅಂಕೆಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ಕಾಣುವಂತೆ ಗುರುತಿಸಲಾಗುತ್ತದೆ.
ಕನ್ನಡ ಅಂಕೆಗಳು | ಇಂಡೋ ಅರೇಬಿಯನ್ ಅಂಕೆಗಳು | ||
---|---|---|---|
೦ | ಸೊನ್ನೆ | 0 | |
೧ | ಒಂದು | 1 | |
೨ | ಎರಡು | 2 | |
೩ | ಮೂರು | 3 | |
೪ | ನಾಲ್ಕು | 4 | |
೫ | ಐದು | 5 | |
೬ | ಆರು | 6 | |
೭ | ಏಳು | 7 | |
೮ | ಎಂಟು | 8 | |
೯ | ಒಂಬತ್ತು | 9 |
ಕನ್ನಡ - ಚಿತ್ರ ದರ್ಶಿನಿ
ಸಂಪೊಲಿಪುಲೆ-
Halmidi OldKannada inscription
-
ಹಲ್ಮಿಡಿ ಗ್ರಾಮದಲ್ಲಿರುವ ಹಲ್ಮಿಡಿ ಶಿಲಾಶಾಸನ (ಹಳಗನ್ನಡ) ಕ್ರಿ.ಶ. 450 (ಕದಂಬ ಸಾಮ್ರಾಜ್ಯ).
-
6th century Kannada inscription in cave temple number 3 at Badamiಹಳಗನ್ನಡದಲ್ಲಿರುವ ಶಿಲಾಶಾಸನ, ಕ್ರಿ.ಶ. 578 (ಬಾದಾಮಿ ಚಾಲುಕ್ಯರು), ಬಾದಾಮಿ ಗುಹೆ #3.
-
ಹಳಗನ್ನಡದಲ್ಲಿರುವ ಶಿಲಾಶಾಸನ, ಕ್ರಿ.ಶ. 726 AD, ತಲಕಾಡು, ರಾಜ ಶಿವಮಾರನದ್ದೋ ಶ್ರೀಪುರುಷನದ್ದೋ ಕಾಲ, (ಪಶ್ಚಿಮ ಗಂಗ ಸಾಮ್ರಾಜ್ಯ).
-
ಹಳಗನ್ನಡದಲ್ಲಿರುವ ಶಿಲಾಶಾಸನ, ಕ್ರಿ.ಶ. ಒಂಬತ್ತನೆಯ ಶತಮಾನ, (ರಾಷ್ಟ್ರಕೂಟ ಸಾಮ್ರಾಜ್ಯ) ದುರ್ಗೆಯ ಗುಡಿ, ಹಂಪಿ.
-
ಮಂಡ್ಯ ಜಿಲ್ಲೆಯ ಅಟಕೂರು ಶಿಲಾಶಾಸನ. (ಕ್ರಿ.ಶ. 949 ) ಎರಡು ಭಾಗಗಳ ರಚನೆ; ನಾಯಿ ಮತ್ತು ಕಾಡುಹಂದಿಯ ಪರಸ್ಪರ ಯುದ್ಧವನ್ನು ಚಿತ್ರಿಸುವ ಶಿಲಾಶಾಸನ ತಕ್ಕೋಳ ಯುದ್ಧದಲ್ಲಿ ಚೋಳ ಸಾಮ್ರಾಜ್ಯದ ಮೇಲೆ ರಾಷ್ಟ್ರಕೂಟರು ಜಯ ಸಾಧಿಸಿದುದನ್ನು ಸೂಚಿಸುತ್ತದೆ.
-
ಪಶ್ಚಿಮ ಚಾಲುಕ್ಯ ಒಂದನೆಯ ಸೋಮಶೇಖರನ ಬಳ್ಳಾರಿ ಜಿಲ್ಲೆಯ ಹಿರಿಯ ಹಡಗಲಿಯ ಕಲ್ಲೇಶ್ವರ ದೇವಸ್ಥಾನದಲ್ಲಿರುವ ಹಳಗನ್ನಡ ಶಿಲಾಶಾಸನ, ಕ್ರಿ. ಶ. 1057.
-
ಕೊಪ್ಪಳ ಜಿಲ್ಲೆಯ ಇಟಗಿ ಮಹಾದೇವ ದೇವಸ್ಥಾನದಲ್ಲಿರುವ ಪಶ್ಚಿಮ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲದ ಹಳಗನ್ನಡ ಶಿಲಾಶಾಸನ, ಕಾಲ ಕ್ರಿ. ಶ 1112.
-
ಹಾಸನ ಜಿಲ್ಲೆಯ ಅರಸಿಕೆರೆ ಪಟ್ಟಣದ ಈಶ್ವರ ದೇವಸ್ಥಾನದಲ್ಲಿರುವ ಹಳಗನ್ನಡ ಶಿಲಾಶಾಸನ, ಕಾಲ ಕ್ರಿ. ಶ.1220 (ಹೊಯ್ಸಳ ಸಾಮ್ರಾಜ್ಯ).
-
ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿರುವ ಕೃಷ್ಣದೇವರಾಯರ (ವಿಜಯನಗರ ಸಾಮ್ರಾಜ್ಯ) ಪಟ್ಟಾಭಿಷೇಕದ ಬಗೆಗಿನ ಕ್ರಿ. ಶ. 1509ರ ಶಿಲಾಶಾಸನ.
-
ಅಸಾಮಾನ್ಯ ಸೌಂದರ್ಯದಿಂದ ಶೋಭಿಸುವ ಯಳಂದೂರಿನಲ್ಲಿರುವ ಕ್ರಿ.ಶ. 1654ರ ಶಿಲಾಶಾಸನ.
-
ಹಲ್ಮಿಡಿ ಶಿಲಾಶಾಸನದ ಪ್ರತಿರೂಪ.
ಕ್ರಿ.ಶ.370–450ತ ಅವಧಿದ ಹಿರಿತನ ಕೊನತ್‌ನ ಕನ್ನಡ ಶಾಸನ
ಸಂಪೊಲಿಪುಲೆ- ಹಲ್ಮಿಡಿಯ ಶಾಸನವನ್ನು ಇದುವರೆಗೂ ಕನ್ನಡದ ಪ್ರಾಚೀನ ಶಾಸನವೆನ್ನಲಾಗುತ್ತಿತ್ತು. ಆದರೆ ಕೇಂದ್ರ ಪುರಾತತ್ವ ಇಲಾಖೆ ಹಲ್ಮಿಡಿಗಿಂತಲೂ ಹಳೆಯದಾದ ಶಾಸನವನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಹತ್ತಿರದ ತಾಳಗುಂದಲ್ಲಿ ಪತ್ತೆ ಹಚ್ಚಲಾಗಿದೆ.ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದದಲ್ಲಿ ಈಚೆಗೆ ಸಿಕ್ಕಿರುವ ಶಾಸನಗಳು ಕನ್ನಡದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿವೆ.
- ಪುರಾತತ್ವ ಇಲಾಖೆಯ ಇಲಾಖೆಯು ನಿವೃತ್ತ ಅಧೀಕ್ಷಕ ಟಿ.ಎಂ. ಕೇಶವ ಅವರ ನೇತೃತ್ವದಲ್ಲಿ ಅಧ್ಯಯನ ನಡೆಸಿ, ಮೊದಲ ಬಾರಿಗೆ 2012–13ರಲ್ಲಿ ಪ್ರಾಯೋಗಿಕ ಉತ್ಖನನ ಪ್ರಾರಂಭಿಸಿತು. ಈ ಸಂದರ್ಭದಲ್ಲಿ ಗಂಗರ ಭೂ ವಿಕ್ರಮ (ಕ್ರಿ. ಶ. 630–670) ಕಾಲದ 13 ಚಿನ್ನದ ಆನೆ ವರಹ ಹಾಗೂ ಒಂದು ವಿಜಯನಗರ/ಕೆಳದಿ ಅರಸರ ನಾಣ್ಯ ಪತ್ತೆಯಾಯಿತು. ಕಲಚೂರಿ ಕಾಲದ ತಾಮ್ರದ ತಟ್ಟೆಗಳು, ಸಾವಿರಾರು ವರ್ಷದ ಹಿಂದಿನ ಪೂಜಾ ಸಾಮಗ್ರಿಗಳು, ಮಣ್ಣಿನ ಹಣತೆ ಲಭಿಸಿದವು.
- ಈ ಗ್ರಾಮವು ಶಿರಾಳಕೊಪ್ಪದಿಂದ ಆರು ಕಿ.ಮೀ. ಅಂತರದಲ್ಲಿದೆ. ಕನ್ನಡದ ಮೂಲ ಬೇರುಗಳು ಇಲ್ಲಿಂದಲೇ ಟಿಸಿಲೊಡೆದು ಜಗತ್ತಿನಾದ್ಯಂತ ಹಬ್ಬಿವೆ. ಕನ್ನಡದ ಪ್ರಥಮ ದೊರೆ ಮಯೂರ ವರ್ಮನ ಜನ್ಮಸ್ಥಳವಾಗಿರುವ ತಾಳಗುಂದ ಹಲವು ಪ್ರಥಮಗಳ ಮುಕುಟವನ್ನು ತನ್ನದಾಗಿಸಿಕೊಂಡಿದೆ. ಕನ್ನಡದ ಪ್ರಥಮ ಸಾಮ್ರಾಜ್ಯ ಎನಿಸಿರುವ ಕದಂಬ ಸಾಮ್ರಾಜ್ಯ ಸ್ಥಾಪನೆ, ಪ್ರಾಚೀನ ಶಿವಲಿಂಗ, ಕೆರೆ, ಶಿಲಾಶಾಸನ, ಕನ್ನಡ ಶಾಲೆ, ವಿಶ್ವವಿದ್ಯಾಲಯ ಸೇರಿದಂತೆ ಕನ್ನಡ ನಾಡಿನ ಹಲವಾರು ಪ್ರಥಮಗಳು ತಾಳಗುಂದ ಗ್ರಾಮದಲ್ಲಿ ನಿರ್ಮಾಣವಾಗಿವೆ. ಈಗ ಆ ಗುಂಪಿಗೆ ಕರ್ನಾಟಕದ ಪ್ರಾಚೀನ ಕನ್ನಡ ಶಾಸನ ಪತ್ತೆಯಾಗಿ ಸೇರ್ಪಡೆಯಾಗಿದೆ.
- ಈ ಶಾಸನವನ್ನು 2014ರಲ್ಲಿಯೇ ಪತ್ತೆ ಹಚ್ಚಲಾಗಿತ್ತು. ಹಲವಾರು ಅಧ್ಯಯನಗಳ ನಂತರ ಈ ಶಾಸನವು ಕ್ರಿ. ಶ. 370–450ರ ಅವಧಿಯದು ಎಂದು ಕಳೆದ ಡಿಸೆಂಬರ್‌ನಲ್ಲಿ ಪುರಾತತ್ವ ಇಲಾಖೆ ಪ್ರಕಟಿಸಿದೆ. ಇಲಾಖೆ 2013–14ರಲ್ಲಿ ಮತ್ತೆ ಪ್ರಾಯೋಗಿಕ ಉತ್ಖನನ ನಡೆಸಿತು. ಆಗ ಒಂದು ಸಿಂಹಕಟಾಂಜನ (ಶಾಸನ) ಲಭ್ಯವಾಯಿತು. ಅದರಲ್ಲಿ ವಜಿನಾಗ(ಯ್ಯ) ಎಂಬ ಅಂಬಿಗನಿಗೆ ಭೂಮಿಯನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ಬೆಳಕು ಚೆಲ್ಲುತ್ತದೆ ಎಂದು ಪುರಾತತ್ವ ಇಲಾಖೆ ಪ್ರಕಟಿಸಿದೆ. ಈ ಶಾಸನದಲ್ಲಿ ತುಂಡರಿಸಿದ ಏಳು ಸಾಲುಗಳಿವೆ. "ಕೊಟ್ಟಾರ್, ನಾಲ್ಕು, ಬೊಯ್ಗರಾ, ನಾಗಣ, ಪುಲಿಂದಿಗೆ, ಕೊಳ್ಳೆ" ಎಂಬ ಕನ್ನಡ ಶಬ್ದಗಳು ಸೇರಿದಂತೆ ಸಂಸ್ಕೃತ ಹಾಗೂ ಕನ್ನಡ ಶಬ್ದಗಳನ್ನು ಬಳಸಲಾಗಿದೆ.[೫೬]
ತೂಲೆ
ಸಂಪೊಲಿಪುಲೆಹೆಚ್ಚಿಗೆ ಓದಿಯೆರೆ ತೂಲೆ
ಸಂಪೊಲಿಪುಲೆಪಿದಯಿದ ಸಂಪರ್ಕೊಲು
ಸಂಪೊಲಿಪುಲೆ- ಪ್ರಾಕೃತ, ಸಂಸ್ಕೃತ, ಕನ್ನಡ : ಆರಂಭಕಾಲದ ಭಾಷಾಬಾಂಧವ್ಯ:ಭಾಷೆಗಳ ಬಳ್ಳಿ ಮತ್ತು ಅಕ್ಷರಸಮಾಜ;ಷ. ಶೆಟ್ಟರ್;5 Feb, 2017
- ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಇತಿಹಾಸ
- ಕನ್ನಡ ಅಕ್ಷರಗಳಿಗೆ ಅಧಿಕೃತವಾದ ಯೂನಿಕೋಡ್ ಪಟ್ಟಿ
- ಕನ್ನಡ ಭಾಷೆಯಲ್ಲಿ ಗಣಕೀಕರಣದ ವಿವರಗಳು
- ಕನ್ನಡ
- ಕನ್ನಡ ಕಲಿಯಿರಿ (Learn Kannada)
- ಕನ್ನಡ ಬರುತ್ತೆ (Learn spoken Kannada)
- ಕನ್ನಡ ಲಿಪಿಯ ವಿಕಾಸ
- ಕನ್ನಡ ಸಾಹಿತ್ಯ ಪರಿಷತ್ತು:[೧]
- ಕನ್ನಡವೆಂಬ ಜ್ಞಾನದ ಭಾಷೆ; ಜಿ.ಎನ್ ದೇವಿ; ೨೮-೧೦-೨೦೧೮
- [alvasnudisiri.com/media/press-release]ಭಾಷಣ | ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀಅಧ್ಯಕ್ಷರ ಭಾಷಣ
- Robert Zydenbos: A Manual of Modern Kannada. Heidelberg 2020 (Open Access: PDF-ರೂಪದಲ್ಲಿ)
ಉಲ್ಲೇಕೊ
ಸಂಪೊಲಿಪುಲೆ- ↑ "Kannada language". teluguworld.org accessdate 25 Aug 2016.
- ↑ Singara – Kannada Sangha (Singapore)
- ↑ "Mallige Kannada Balaga: Spreading Fragrance of Karnataka in Mauritius". Daijiworld.com. Retrieved 12 February 2013.
- ↑ [http: //www.daijiworld. com/ news/news_disp.asp?n_id=97803 "Dubai: Kannada Koota UAE to Hold 'Sangeetha Saurabha'"]. Daijiworld.com. Retrieved 12 February 2013.
{{cite web}}
: Check|url=
value (help) - ↑ [http: //www. thaikannadabalaga.com "Thai Kannada Balaga"]. "Thai Kannada Balaga". Retrieved 12 February 2013.
{{cite web}}
: Check|url=
value (help) - ↑ http://kanaja.in/?p=134049 ಬ್ರಾಹ್ಮಿ- ಪ್ರಾಕೃತವನ್ನು ಹಿಮ್ಮೆಟ್ಟಿಸಿದ ಸಂಸ್ಕೃತ ಕನ್ನಡ
- ↑ Nationalencyklopedin "Världens 100 största språk 2007" The World's 100 Largest Languages in 2007
- ↑ "Indiaspeak: English is our 2nd language". Times of India. 14 March 2010. Retrieved 12 February 2013.
- ↑ Zvelebil (fig.36) and Krishnamurthy (fig.37) in Shapiro and Schiffman (1981), pp. 95–96
- ↑ "The Karnataka Official Language Act" (PDF). Official website of Department of Parliamentary Affairs and Legislation.
- ↑ The Karnataka official language act, 1963 – Karnataka Gazette (Extraordinary) Part IV-2A. Government of Karnataka. 1963. p. 33.
- ↑ "Gangas of Talakad". Official website of the Central Institute of Indian Languages, India. Classicalkannada.org. Retrieved 12 May 2008.
- ↑ "Rastrakutas". Official website of the Central Institute of Indian Languages. Retrieved 12 May 2008.
- ↑ Zvelebil (1973), p.7 (Introductory, chart)
- ↑ ಗರ್ಗ್ (1992), p.67
- ↑ Steever, S.B. (1998), p. 129
- ↑ ೧೭.೦ ೧೭.೧ "Classical Kannada, Antiquity of Kannada". Centre for classical Kannada. Central Institute for Indian Languages. Retrieved 2011-08-28.
- ↑ Iravatham Mahadevan. "Early Tamil Epigraphy from the Earliest Times to the Sixth Century AD". Harvard University Press. Retrieved 12 April 2007.
- ↑ Kamath (2001), p. 5–6
- ↑ (Wilks in Rice, B.L. (1897), p490)
- ↑ Pai and Narasimhachar in Bhat (1993), p103
- ↑ ೨೨.೦ ೨೨.೧ Mythic Society (Bangalore, India) (1985). The quarterly journal of the Mythic society (Bangalore)., Volume 76. Mythic Society (Bangalore, India ). pp. Pages_197–210.
- ↑ B. K. Khadabadi, Prākr̥ta Bhāratī Akādamī (1997). Studies in Jainology, Prakrit literature, and languages: a collection of select 51 papers Volume 116 of Prakrit Bharti pushpa. Prakrit Bharati Academy ,. pp. 444 pages.
{{cite book}}
: CS1 maint: extra punctuation (link) - ↑ Jha, Ganganatha (1976). Journal of the Ganganatha Jha Kendriya Sanskrit Vidyapeetha, Volume 32. Ganganatha Jha Kendriya Sanskrit Vidyapeetha,. pp. see page 319.
{{cite book}}
: CS1 maint: extra punctuation (link) - ↑ Kulli, Jayavant S (1991). History of grammatical theories in Kannada. Internationial School of Dravidian Linguistics,. pp. 330 pages.
{{cite book}}
: CS1 maint: extra punctuation (link) - ↑ ಕಾಮತ್ (2001), p67
- ↑ ೨೭.೦ ೨೭.೧ Sastri (1955), p355
- ↑ ಕಾಮತ್ (2001), p90
- ↑ Jyotsna Kamat. "History of the Kannada Literature-I". Kamat's Potpourri, 4 November 2006. Kamat's Potpourri. Retrieved 25 November 2006.
- ↑ ಶಾಸ್ತ್ರಿ (1955), p356
- ↑ ಶಾಸ್ತ್ರಿ (1955), p364
- ↑ "ಎಲ್ಲಾ ದ್ರಾವಿಡ ಭಾಷೆಗಳಲ್ಲಿಯೂ ಇರುವ ಸಾಹಿತ್ಯ ಅಗಾಧ ಪ್ರಮಾಣದಲ್ಲಿ ಸಂಸ್ಕೃತದ ಪ್ರಭಾವಕ್ಕೊಳಗಾಯಿತು.
- ಸಂಸ್ಕೃತ ಒಂದು ಮಂತ್ರದಂಡದಂತೆ ಸ್ಪರ್ಶ ಮಾತ್ರದಿಂದ ಒಂದೊಂದು ಭಾಷೆಯನ್ನೂ ಮೇಲಕ್ಕೆತ್ತಿತು". (ಶಾಸ್ತ್ರಿ 1955, p309)
- ↑ ತಕನೋಬು ತಕಹಾಷಿ 1995. ತಮಿಳು ಪ್ರೇಮ ಕವಿತೆಯೂ ಕಾವ್ಯವೂ. Brill's Indological library, v. 9. Leiden: E.J. Brill, p16,18
- ↑ " ಈ ಗ್ರಂಥದ ಕರ್ತೃ, ಸಂಘಕಾಲ ಸಾಹಿತ್ಯ ಅಗಾಧ ಪ್ರಮಾಣದಲ್ಲಿ ಸಂಸ್ಕೃತ ಕಾವ್ಯಪರಂಪರೆಯಿಂದ ಪ್ರಭಾವಗೊಂಡಿದೆಯೆಂಬುದನ್ನು ತೋರಿಸಿಕೊಡುತ್ತಾರೆ."- ಹರ್ಮನ್ ಜೋಸೆಫ್ ಹ್ಯೂಗೋ ಟಿಕ್ಕನ್. 2001. ದಕ್ಷಿಣಭಾರತದ ಕಾವ್ಯ: ಹಳೆಯ ಸಂಘಂ ತಮಿಳು ಕಾವ್ಯ. Groningen: Egbert Forsten
- ↑ ಜೆ. ಬುಚ್ಚರ್; ಫರ್ಡಿನಾಂಡ ಕಿಟ್ಟೆಲ್ (1899). A Kannada-English school-dictionary: chiefly based on the labours of the Rev. Dr. F. Kittel. ಬಾಸೆಲ್ ಮಿಷನ್ & Tract Depository.
- ↑ ಶಾಸ್ತ್ರಿ (1955), pp 364–365
- ↑ ಈ ಕೃತಿಯಲ್ಲಿ ಕರುನಾಡಿನ ಎಲ್ಲಾ ಧಾನ್ಯಗಳಿಗಿಂತ ರಾಗಿಯೇ ಮಿಗಿಲೆನ್ನಲಾಗಿದೆ.(ಶಾಸ್ತ್ರಿ 1955, p365)
- ↑ ಮೂರ್ತಿ, ವಿಜಯಾ (2001). Romance of the Raga. ಅಭಿನವ ಪ್ರಕಾಶನ. p. 67. ISBN 81-7017-382-5.
- ↑ ಅಯ್ಯರ್ (2006), p93
- ↑ ಶಾಸ್ತ್ರಿ(1955), p365
- ↑ ಮೈಸೂರು ಆಡಳಿತದ ಕುರಿತಾದ ವರದಿ- ಪು. ೯೦ ಮೈಸೂರು, ೧೮೬೪ "ಕನ್ನಡದಲ್ಲಿ ಮೊದಲ ಬಾರಿಗೆ ಅಚ್ಚುಗೊಂಡ ಕೃತಿಯ ಬಗ್ಗೆ ವಿವರಗಳು ದೊರೆತಿಲ್ಲ. ಆದರೆ ೧೮೧೭ರಲ್ಲಿ ವಿಲಿಯಂ ಕಾರಿ ರಚಿಸಿ ಶ್ರೀರಾಮಪುರದಿಂದ ಪ್ರಕಾಶನಗೊಂಡ ಕಾನರೀಸ್ ವ್ಯಾಕರಣ ಎಂಬ ಕೃತಿ ಲಭ್ಯವಾಗಿದೆ. ಮತಗ್ರಂಥಗಳ ಕನ್ನಡ ಅನುವಾದಗಳು ಸುಮಾರು ಇದೇ ಕಾಲಘಟ್ಟದಲ್ಲಿ ಪ್ರಕಾಶನಗೊಂಡುವು.
- ↑ ಮಿಷನ್ಸ್ ಇನ್ ಸೌತ್ ಇಂಡಿಯಾ - ಪುಟ ೫೬, ಜೋಸೆಫ್ ಮುಲ್ಲನ್ಸ್ - ೧೮೫೪ "Among those of the former are tracts on Caste, on the Hindu gods ; Canarese Proverbs ; Henry and his Bearer ; the Pilgrim's Progress; Barth's Bible Stories; a Canarese hymn book"
- ↑ Special Correspondent (20 September 2011). "The Hindu – Jnanpith for Kambar". Thehindu.com. Retrieved 2013-02-12.
{{cite web}}
:|author=
has generic name (help) - ↑ net/laureates/index.html "Welcome to: Bhartiya Jnanpith". jnanpith.net. Retrieved 7 November 2008.
{{cite web}}
: Check|url=
value (help) - ↑ "ಭೈರಪ್ಪನವರಿಗೆ ಸರಸ್ವತಿ ಸಮ್ಮಾನ್ ". ಟೈಮ್ಸ್ ಆಫ್ ಇಂಡಿಯಾ. 6 April 2011.
- ↑ http://www.ethnologue.com/language/kan 20 dialects of Kannada.
- ↑ http://gospelgo.com/q/Badaga%20Bible%20-%20Gospel%20of%20Luke.pdf
- ↑ "Declaration of Telugu and Kannada as classical languages". Press Information Bureau. Ministry of Culture, Government of India. 31 October 2008. Retrieved 17 February 2013.
- ↑ Kuiper (2011), p.74
- ↑ "Telugu, Kannada get classical tag". The Times of India. 1 November 2008.
{{cite news}}
: line feed character in|title=
at position 21 (help) - ↑ "IBNLive – CIIL to head Centre for classical Kannada study". Ibnlive.in.com. 23 July 2011. Retrieved 12 February 2013.
- ↑ ಮಂಜುಳಾಕ್ಷಿ ಮತ್ತು ಭಟ್. "Kannada Dialect Dictionaries and Dictionaries in Subregional Languages of Karnataka". Language in India, Volume 5 : 9 September 2005. Central Institute of Indian Languages, University of Mysore. Retrieved 11 April 2007.
- ↑ Ferdinand Kittel. rnNxtHfKxZAC&pg=PP11&lpg=PP11&ots= p8gHyBeg7y&dq= kannada+ grammar&sig=UEOhCXLrlp_eSLfYwh7GOvwVK4Q#PPP1,M1 A Grammar of the Kannada Language: Comprising the Three Dialects of the Language. 1993. Asian Educational Services. ISBN 81-206-0056-8
- ↑ Muralidhara Khajane (22 August 2012). "Today's Paper / NATIONAL : 100 years on, words never fail him". The Hindu. Retrieved 2013-02-12.
- ↑ Johnson Language (20 August 2012). "Language in India: Kannada, threatened at home". The Economist. Retrieved 2013-02-12.
- ↑ ಹಿರಿತನ ತಂದ ಶಾಸನ;ಎಂ.ನವೀನ್ ಕುಮಾರ್;4 Apr, 2017;ಲೇಖಕರು ಅಧ್ಯಕ್ಷರು, ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಶಿರಾಳಕೊಪ್ಪ
ವರ್ಗ:ಭಾರತೀಯ ಬಾಸೆಲು ವರ್ಗ:ದ್ರಾವಿಡ ಬಾಸೆಲು ವರ್ಗ:ಕನ್ನಡ ವರ್ಗ:ಕರ್ನಾಟಕ